ETV Bharat / state

ನಾವು ದೇವಸ್ಥಾನಗಳ 10,700 ಎಕರೆ ಜಮೀನು ರಕ್ಷಿಸಿದ್ದರೆ, ವಕ್ಫ್​​ದು ಕೇವಲ 600 ಎಕರೆ ಮಾತ್ರ ರಕ್ಷಣೆ: ಕೃಷ್ಣ ಬೈರೇಗೌಡ - CLARIFICATION ON WAQF PROPERTY

ಸರ್ಕಾರಿ ಶಾಲೆ, ಹಿಂದೂ ರುದ್ರಭೂಮಿ, ದೇವಸ್ಥಾನ ಇದ್ದರೆ ಅಲ್ಲಿ ವಕ್ಫ್​​ ಆಸ್ತಿ ಎಂದು ತರಲೇಬಾರದೆಂದು ಸೂಚಿಸಲಾಗಿದೆ. ದಾಖಲೆ ಇಲ್ಲದೇ ಭೂಮಿ ಒತ್ತುವರಿಯಾಗಿದ್ದರೆ ತೆರವು ಮಾಡುತ್ತೇವೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

MINISTER KRISHNA BYRE GOWDA
ಕೃಷ್ಣ ಬೈರೇಗೌಡ (ETV Bharat)
author img

By ETV Bharat Karnataka Team

Published : Dec 19, 2024, 7:07 AM IST

ಬೆಳಗಾವಿ: ''ನಮ್ಮ ಸರ್ಕಾರ ಮುಜರಾಯಿ ದೇವಸ್ಥಾನಗಳ 10,700 ಎಕರೆ ಜಮೀನು ಖಾತೆ ಬದಲಾಯಿಸಿ ಸಂರಕ್ಷಿಸಿದ್ದರೆ, ವಕ್ಫ್​​​ಗೆ ಕೇವಲ 600 ಎಕರೆ ಜಮೀನಿನ ಖಾತೆ ಬದಲಾವಣೆ ಮಾಡಿದ್ದೇವೆ'' ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟಪಡಿಸಿದ್ದಾರೆ.

ವಿಧಾನಸಭೆಯಲ್ಲಿ ವಕ್ಫ್ ನಿಲುವಳಿ ಸೂಚನೆಗೆ ಉತ್ತರಿಸಿದ ಸಚಿವ ಕೃಷ್ಣ ಬೈರೇಗೌಡ, ''ಬಿಜೆಪಿ ವಕ್ಫ್ ವಿಚಾರವಾಗಿ ಸುಳ್ಳಿನ ಸರಮಾಲೆ ಹೇಳಿದೆ. 2004ರಿಂದೀಚೆಗೆ ರಾಜ್ಯದಲ್ಲಿ ಒಟ್ಟು 9,800 ವಕ್ಫ್ ಆಸ್ತಿ ಎಂದು ನಮೂದಾಗಿದೆ. ಇದರಲ್ಲಿ ಬಾಧಿತ ರೈತರ ಸಂಖ್ಯೆ 11,204. ಈ ಪೈಕಿ 9,121 ಮುಸಲ್ಮಾನರು ಬಾಧಿತರಾಗಿದ್ದಾರೆ. 2,080 ಮಾತ್ರ ಹಿಂದೂಗಳಿದ್ದಾರೆ. ಅಂದರೆ, 85% ಮುಸ್ಲಿಂಮರಿಗೆ ನೋಟಿಸ್ ಹೋಗಿದೆ‌. ಕೇವಲ 15% ಮಾತ್ರ ಹಿಂದೂಗಳಿಗೆ ರೈತರಿಗೆ ನೋಟಿಸ್ ಹೋಗಿದೆ'' ಎಂದು ತಿಳಿಸಿದರು.

''ವಕ್ಫ್ ಮಾತ್ರ ಅಲ್ಲ ಮುಜರಾಯಿ ಆಸ್ತಿಯನ್ನೂ ನಮ್ಮ ಸರ್ಕಾರ ಸಂರಕ್ಷಣೆ ಮಾಡಿದೆ. ನಮ್ಮ ಸರ್ಕಾರ ಬಂದ ಬಳಿಕ 2023ರಲ್ಲಿ ನಾವು 5,402 ಎಕರೆ ಮುಜರಾಯಿ ದೇವಸ್ಥಾನಕ್ಕೆ ಖಾತೆ ಮಾಡಿದ್ದೇವೆ. 2024ರಲ್ಲಿ 5,287 ಎಕರೆ ಮುಜರಾಯಿ ದೇವಸ್ಥಾನಕ್ಕೆ ಖಾತೆ ಮಾಡಲಾಗಿದೆ. 10,700 ಎಕರೆ ಜಮೀನನ್ನು ದೇವಸ್ಥಾನಗಳ ಹೆಸರಿಗೆ ಖಾತೆ ಮಾಡಿದ್ದೇವೆ. ಆದರೆ, ವಕ್ಫ್ ಆಸ್ತಿ ಎಂದು ಖಾತೆ ಬದಲಾವಣೆ ಮಾಡಿರುವುದು ಕೇವಲ 600 ಎಕರೆ ಮಾತ್ರ'' ಎಂದು ಮಾಹಿತಿ ನೀಡಿದರು.

20,000 ಎಕರೆ ಮಾತ್ರ ಒತ್ತುವರಿ: ''ವಕ್ಫ್​​​ಗೆ 1,12,000 ಎಕರೆ ಜಮೀನು ಅಧಿಸೂಚನೆ ಆಗಿದೆ. ಅದರಲ್ಲಿ 20,000 ಎಕರೆ ಜಮೀನು ವಕ್ಫ್​​​ಗೆ ಸಿಕ್ಕಿದೆ. ಉಳಿದ 92,000 ಎಕರೆ ಜಮೀನು ಇನ್ನೂ ಸಿಕ್ಕಿಲ್ಲ. ಅಂದಿನ ಅವ್ಯವಸ್ಥೆಯಿಂದ ಅದು ವಕ್ಫ್​​​ಗೆ ಸಿಕ್ಕಿಲ್ಲ. ಇನಾಮ್ ಅಬೋಲಿಷನ್​​ನಲ್ಲಿ ಗ್ರಾಂಟ್, ಭೂ ಸುಧಾರಣೆ ಕಾಯ್ದೆಯಲ್ಲಿ ಭೂಮಿ ಮಂಜೂರಾದ ರೈತರ ತಂಟೆಗೆ ಸರ್ಕಾರ ಹೋಗುವುದಿಲ್ಲ. ಆ ತರ 70,000 ಎಕರೆ ಜಮೀನು ರೈತರಿಗೆ ಮಂಜೂರಾಗಿದೆ. ವಕ್ಫ್ ಜಮೀನಿನಲ್ಲಿ ಮಸೀದಿ, ದರ್ಗಾ, ಖಬರಿಸ್ತಾನ್ ಇದೆ. ಅಂತದ್ದು ಒತ್ತುವರಿ ಆಗಿದ್ದರೆ ಅದನ್ನು ಬಿಟ್ಟು ಕೊಡುವಂತೆ ಹೇಳಿದ್ದಾರೆ. ಒತ್ತುವರಿಯಾಗಿರುವ 20,000 ಎಕರೆ ಮಾತ್ರ ಕೊಡಿ ಎಂದು ಕೇಳಿದ್ದಾರೆ. ರಾಜ್ಯದಲ್ಲಿನ ಒಟ್ಟು 3 ಕೋಟಿ ಕೃಷಿ ಜಮೀನಿನಲ್ಲಿ 20,000 ಎಕರೆ ಜಮೀನನ್ನು ಮಾತ್ರ ಕೇಳುತ್ತಿದ್ದಾರೆ. ಇದರಿಂದ ಲಕ್ಷದಲ್ಲಿ ಒಬ್ಬ ರೈತನಿಗೂ ಇದರಿಂದ ಸಮಸ್ಯೆ ಆಗಲ್ಲ. ಯಾರೂ ಆತಂಕಕ್ಕೆ ಒಳಗಾಗುವುದು ಬೇಡ'' ಎಂದು ಅಭಯ ನೀಡಿದರು.

ಬಿಜೆಪಿ ಅವಧಿಯಲ್ಲಿ 4,500 ಖಾತೆ ಬದಲಾವಣೆ: ''2018-19ರಲ್ಲಿ ಕಾಂಗ್ರೆಸ್ ಅವಧಿಯಲ್ಲಿ ಯಾವುದೇ ಖಾತೆ ಬದಲಾವಣೆ ಆಗಿಲ್ಲ. 2019-20ರಲ್ಲಿ ಬಿಜೆಪಿ ಅವಧಿಯಲ್ಲಿ 578 ಖಾತೆ ಬದಲಾವಣೆಯಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕಾಂಗ್ರೆಸ್ ಅವಧಿಯಲ್ಲಿ ಎರಡು ಖಾತೆ ಬದಲಾವಣೆಯಾಗಿದ್ದರೆ, ಬಿಜೆಪಿ ಅವಧಿಯಲ್ಲಿ 50 ಖಾತೆ ಬದಲಾವಣೆ ಆಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಅವಧಿಯಲ್ಲಿ 6 ಖಾತೆ ಬದಲಾವಣೆಯಾಗಿದ್ದರೆ, ಬಿಜೆಪಿ ಅವಧಿಯಲ್ಲಿ 90 ಖಾತೆ ಬದಲಾವಣೆ ಆಗಿದೆ. ಬೆ.ನಗರದಲ್ಲಿ ಕಾಂಗ್ರೆಸ್ ಅವಧಿಯಲ್ಲಿ ಎರಡು ಖಾತೆ ಬದಲಾವಣೆ ಆಗಿದೆ. ಬಿಜೆಪಿ ಅವಧಿಯಲ್ಲಿ 97 ಖಾತೆ ಬದಲಾವಣೆ ಮಾಡಲಾಗಿದೆ. ಇದನ್ನು ತಪ್ಪು ಅಂತ ಅನ್ನಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಬಂದಾಗ ಆಗಿದ್ದು ಅಂತ ಆರೋಪ ಮಾಡುತ್ತಿದ್ದಾರೆ. ಬಿಜೆಪಿ ಅವಧಿಯಲ್ಲಿ ಒಟ್ಟೂ 4,500 ಖಾತೆ ಬದಲಾವಣೆ ಆಗಿದ್ದು, ಕಾಂಗ್ರೆಸ್ ಅಧಿಕಾರದಲ್ಲಿ 600 ಖಾತೆ ಬದಲಾವಣೆ ಆಗಿದೆ'' ಎಂದರು.

ಹೈಕೋರ್ಟ್ ಆದೇಶದಂತೆ ನೋಟಿಸ್​: ''ಮೈಸೂರಿನ ಮುನೇಶ್ವರ ನಗರದ 110 ಕುರುಬರ ಮನೆಗಳಿಗೆ ವಕ್ಫ್ ನೋಟಿಸ್ ನೀಡಿದೆ ಎಂದು ಬಿಜೆಪಿ ಆರೋಪ ಮಾಡಿದೆ. 13.04 ಗುಂಟೆ ಅಲ್ಲಿ ವಕ್ಫ್ ನೊಟಿಫೈ ಆಗಿರೋದು ನಿಜ. ಆದರೆ ವಕ್ಫ್​​ನವರು ಹೋಗಿ ಖಾಲಿ ಮಾಡಿಸಿಕೊಡಿ ಅಂತ ಕೇಳಿಲ್ಲ. ಅಲ್ಲಿ ನೂರು ಮನೆಗಳಿವೆ, ವಕ್ಫ್ ಆಸ್ತಿ ಒತ್ತುವರಿ ಆಗಿದೆ ಅಂತ ಪಕ್ಕದಲ್ಲಿದ್ದವರು ಕೇಸ್ ಕೊಟ್ಟಿದ್ದಾರೆ. ಹೈಕೋರ್ಟ್​​​ನಲ್ಲಿ ವಿಚಾರಣೆ ನಡೆದು ಡಿಸಿಗೆ ಕೋರ್ಟ್ ನೋಟಿಸ್ ಕೊಡಲು ಹೇಳಿದೆ. ಹೈಕೋರ್ಟ್ ನಿರ್ದೇಶನ ಮೇರೆಗೆ ವಕ್ಫ್ ನೋಟಿಸ್ ಕೊಡಲಾಗಿದೆ. ಆದರೆ, ಬಿಜೆಪಿ ಸುಳ್ಳು ಹೇಳಿದೆ. ಕಂಟೆಪ್ಟ್ ಆಗುವ ಸಂದರ್ಭ ಬಂದಾಗ ಮಾತ್ರ ವಕ್ಫ್​​​ನವರು ನೋಟಿಸ್ ಕೊಟ್ಟರು ಎಂದು ತಿಳಿಸಿದರು.

''ಇತ್ತ ವಿಜಯಪುರದಲ್ಲಿ ಸೋಮೇಶ್ವರ ದೇವಸ್ಥಾನ ವಕ್ಫ್ ಆಗಿದೆ ಅಂತ ಆರೋಪಿಸಿದ್ದರು. ಆ ಸರ್ವೆ ನಂಬರ್​​ನಲ್ಲಿ 57 ಎಕರೆ ಜಮೀನಿದೆ. ಇದರಲ್ಲಿ ವಕ್ಫ್​​​​ಗೆ ಇರೋದು ಕೇವಲ 2 ಎಕರೆ. ಇನ್ನುಳಿದ ಭೂಮಿಯಲ್ಲಿ 18 ಜನ ರೈತರಿದ್ದಾರೆ, ಇಲ್ಲೇ ಸೋಮೇಶ್ವರ ದೇವಾಲಯ ಇರೋದು.‌ ವಕ್ಫ್ ಭೂಮಿಗೂ ಸೋಮೇಶ್ವರ ಭೂಮಿಗೂ ಸಂಬಂಧ ಇಲ್ಲ. ಒಂದೇ ಸರ್ವೆ ನಂಬರ್ ಅಂತ ಇದು ವಕ್ಫ್ ಆಸ್ತಿ ಅಂತ ಬಿಜೆಪಿಯವರು ಕಥೆ ಕಟ್ಟಿಬಿಟ್ಟರು'' ಎಂದು ದೂರಿದರು.

ತಹಶೀಲ್ದಾರರ ಲೋಪ ಸರಿಪಡಿಸಲಾಗಿದೆ: ''ಶ್ರೀರಂಗಪಟ್ಟಣದ ದೊಡ್ಡ ಹಾರೋಹಳ್ಳಿಯ ಸರ್ವೆ ನಂಬರ್ 74ರಲ್ಲಿ 12 ಗುಂಟೆ ವಕ್ಫ್​​​​ ಜಾಗವಿದೆ. ಅಲ್ಲಿ ಮಸೀದಿ ಇದೆ. ಇದನ್ನು ಪಹಣಿಯಲ್ಲಿ ಎಂಟ್ರಿ ಮಾಡುವಾಗ ತಹಶೀಲ್ದಾರರು ಗೊಂದಲ ಮಾಡಿಕೊಂಡು ಮಹದೇವಪುರ ಗ್ರಾಮದಲ್ಲಿ 6 ಗುಂಟೆ ಅಂತ ವಕ್ಫ್​​​​ಗೆ ಎಂದು ಈ ಮಸೀದಿಯ ಹೆಸರಿಗೆ ಮಾಡಿದ್ದಾರೆ. ಇದು ಮನುಷ್ಯ ಸಹಜ ಲೋಪ. ಆ ಜಾಗದಲ್ಲಿ ಚಿಕ್ಕಮ್ಮನ ಗುಡಿ ಇದೆ, ಇದಕ್ಕೂ ದಾಖಲೆ ಇಲ್ಲ. ಈಗ ಇದನ್ನೂ ಸರಿಪಡಿಸಲಾಗಿದೆ. ಪಹಣಿಯಲ್ಲಿ ಚಿಕ್ಕಮ್ಮನ ಗುಡಿ ಅಂತ ಎಂಟ್ರಿ ಮಾಡಿದ್ದೇವೆ'' ಎಂದು ಸ್ಪಷ್ಟಪಡಿಸಿದರು.

''ಮುದ್ದೇನಹಳ್ಳಿಯ ಸರ್​ ಎಂ.ವಿಶ್ವೇಶ್ವರಯ್ಯ ಅವರು ಓದಿದ ಶಾಲೆ ವಕ್ಫ್ ಆಸ್ತಿ ಎಂದು ನೋಟಿಸ್ ಕೊಟ್ಟಿರುವ ಬಗ್ಗೆ ವಿಪಕ್ಷ ಆರೋಪ ಮಾಡುತ್ತಿದೆ.‌ ಆದರೆ ಆ ಶಾಲೆ 2019ರಲ್ಲಿ ಬಿಜೆಪಿ ಸರ್ಕಾರದ ವೇಳೆ ವಕ್ಫ್​​​​ ಆಸ್ತಿ ಎಂದು ನಮೂದಿಸಿದೆ. ನಮ್ಮ ಸರ್ಕಾರ ಬಂದ ಬಳಿಕ 8.11.2024ರಂದು ಆ ಜಾಗವನ್ನು ಶಾಲೆ ಹೆಸರಿಗೆ ರಿಸ್ಟೋರ್ ಮಾಡಿದ್ದೇವೆ. 1.04 ಗುಂಟೆ ಜಮೀನನ್ನು ದರ್ಗಾಗೆ ನೀಡಿದ್ದೇವೆ. ಸರ್ಕಾರಿ ಶಾಲೆಗೆ 17.1 ಗುಂಟೆ ಭೂಮಿ ಕೊಟ್ಟಿದ್ದೇವೆ'' ಎಂದರು.‌

ಸಾವಿನಲ್ಲೂ ಬಿಜೆಪಿ ರಾಜಕಾರಣ: ''ವಿಜಯಪುರದಲ್ಲಿ ಜಿಲ್ಲಾಧಿಕಾರಿ ಮನೆ ವಕ್ಫ್ ಆಸ್ತಿಯಾಗಿದೆ​​​​ ಎಂದು ಹೇಳಿದರು. 400 ವರ್ಷ ಹಳೆಯ ಕಟ್ಟಡ. ಅದು ವಕ್ಫ್​​​​ ಅಂತ ಎಲ್ಲೂ ಬಂದಿಲ್ಲ. ಎಸ್.ಪಿ ಮನೆಯೇ ವಕ್ಫ್ ಆಸ್ತಿ ಎಂದು ಬಿಜೆಪಿಯವರು ಅರೋಪಿಸಿದ್ದರು. ಇದಕ್ಕೂ ವಕ್ಫ್​​ಗೂ ಸಂಬಂಧವೇ ಇಲ್ಲ. ಅವರು ವಕ್ಫ್​​ ಆಸ್ತಿ ಎಂದು ಕೇಳಲೂ ಇಲ್ಲ. ಜಿಲ್ಲಾಸ್ಪತ್ರೆಯೂ ವಕ್ಫ್​​ ಆಸ್ತಿ ಅಲ್ಲ. ಅವರು ಅದನ್ನು ಕೇಳಲೂ ಇಲ್ಲ. ಆದರೆ ಬಿಜೆಪಿಯವರು ಸುಳ್ಳಿನ ಕಥೆ ಕಟ್ಟಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಹಾವೇರಿ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. 2022ರಲ್ಲಿ ಆತ್ಮಹತ್ಯೆ ನಡೆದಿತ್ತು. ಮಹಜರಿನಲ್ಲಿ ಬ್ಯಾಂಕ್​ನಲ್ಲಿ ಸಾಲ ಪಡೆದು ಅದರ ಬಾಧೆಯಿಂದ ಆತ್ಮಹತ್ಯೆ ಎಂದು ಬರೆಯಲಾಗಿದೆ. ಆದರೆ, ಬಿಜೆಪಿಯವರು ವಕ್ಫ್​​ಗೆ ಆತ್ಮಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದರು. ಸಾವಿನಲ್ಲೂ ಬಿಜೆಪಿಯವರು ರಾಜಕಾರಣ ಮಾಡಿದ್ದಾರೆ'' ಎಂದು ಬೈರೇಗೌಡ ಟೀಕಿಸಿದರು.

ದಾಖಲೆ ಇಲ್ಲದೇ ಒತ್ತುವರಿ ಮಾಡಿದ್ದರೆ ತೆರವು: ''ಸರ್ಕಾರಿ ಶಾಲೆ, ಹಿಂದೂ ರುದ್ರಭೂಮಿ, ದೇವಸ್ಥಾನ ಇದ್ದರೆ ಅಲ್ಲಿ ವಕ್ಫ್​​ ಆಸ್ತಿ ಎಂದು ತರಲೇಬಾರದು ಎಂದು ಸಿಎಂ ಹೇಳಿದ್ದಾರೆ.‌ ಯಾವ ಜಾಗದಲ್ಲಿ ಮಸೀದಿ, ಖಬರಿಸ್ತಾನ್, ಈದ್ಗಾ, ಮದರಸಾ ಇವೆಯೋ ಅವುಗಳನ್ನು ದಾಖಲೆಯಲ್ಲಿ ವಕ್ಫ್ ಎಂದು ತರಲು ಸೂಚನೆ ನೀಡಲಾಗಿದೆ. ಭೂ ಸುಧಾರಣೆ ಕಾಯ್ದೆಯಡಿ, ಇನಾಮ್ ಅಬಾಲಿಷನ್ ಕಾಯ್ದೆಯಲ್ಲಿ ರೈತರಿಗೆ ಬಂದ ಭೂಮಿಯನ್ನು ವಕ್ಫ್ ತರಬಾರದು. ಅವರ ತಂಟೆಗೆ ಹೋಗಬಾರದು ಎಂದು ಸಿಎಂ ಸೂಚಿಸಿದ್ದಾರೆ. ಆ ಬಗ್ಗೆ ನಿರ್ಣಯ ಕೈಗೊಂಡಿದ್ದೇವೆ. ದಾಖಲೆ ಇಲ್ಲದೆ ಭೂಮಿಯನ್ನು ಒತ್ತುವರಿ ಮಾಡಿದ್ದರೆ, ಅದನ್ನು ತೆರವು ಮಾಡುತ್ತೇವೆ. ರೈತರಿಗೆ ಮಂಜೂರಾದ ಕಡೆ ರೈತರ ಹಿತ ಕಾಪಾಡುತ್ತೇವೆ. ನಾಡಿನ ಜನರಿಗೆ ಸುಳ್ಳಿಗೆ ಕಿವಿ ಕೊಡಬೇಡಿ'' ಎಂದು ಮನವಿ ಮಾಡಿದರು.

ಇದನ್ನೂ ಓದಿ: ಶೇ.95ರಷ್ಟು ವಕ್ಫ್ ಆಸ್ತಿ ಮುಸ್ಲಿಮರಿಂದಲೇ ಒತ್ತುವರಿ; ದೇವಸ್ಥಾನ, ರೈತರ ಆಸ್ತಿ ಮುಟ್ಟಲ್ಲ - ಸಚಿವ ಜಮೀರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.