ದಂಡಾ ಹಿಡ್ಕೊಂಡು ಕಾಡು ಸುತ್ತುವ ಜಿಲ್ಲಾ ದಂಡಾಧಿಕಾರಿ... ವಿದ್ಯಾರ್ಥಿಗಳಿಗೆ ಡಿಸಿ ಸಾಹೇಬರಿಂದ ಪ್ರಕೃತಿ ಪಾಠ! - kannadanews
🎬 Watch Now: Feature Video
ಶಿವಮೊಗ್ಗದ ಜಿಲ್ಲಾಧಿಕಾರಿ ಈಗ ಕಾಡು-ಮೇಡು ಸುತ್ತೋದಕ್ಕೆ ಹೊರಟಿದ್ದಾರೆ. ಹಾಗೇ ಅವರು ಕಾಡಿಗೆ ಹೊರಡೋದು ಒಬ್ಬೊಬ್ಬರೇ ಅಲ್ಲ.. ಅವರ ಹಿಂದೆ ನೂರಾರು ವಿದ್ಯಾರ್ಥಿಗಳ ದಂಡೇ ಇರುತ್ತೆ. ಅವರು ಮಾಡೋ ಕೆಲಸ ನೋಡಿದ್ರೇ ನೀವೂ ಭೇಷ್ ಭೇಷ್ ಅನ್ನದೇ ಇರೋದಿಲ್ಲ. ಶಿವಮೊಗ್ಗದ ವಿವಿಧ ಶಾಲೆ-ಕಾಲೇಜು ವಿದ್ಯಾರ್ಥಿಗಳನ್ನು ಕರೆತಂದು, ಇಲ್ಲಿ ಬೀಜ ಬಿತ್ತಿದರು. ಪರಿಸರ, ಪ್ರಾಣಿಗಳ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಿದ್ದಾರೆ ಜಿಲ್ಲಾಧಿಕಾರಿಗಳು. ಕಾಡು ಮೃಗಗಳಿಂದ ಆತ್ಮರಕ್ಷಣೆ ಹೇಗೆ ಅನ್ನೋದನ್ನ ಮಕ್ಕಳಿಗೆ ಹೇಳಿಕೊಟ್ಟಿದ್ದಾರೆ.