ಕೋಲಾರ ಚೂರಿ ಇರಿತ ಪ್ರಕರಣ.. ಆರ್ಎಸ್ಎಸ್ ಮುಖಂಡನ ಆರೋಗ್ಯ ವಿಚಾರಿಸಿದ ಸಚಿವರು - ಆರ್ಎಸ್ಎಸ್ ಮುಖಂಡ ರವಿಕುಮಾರ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16039931-thumbnail-3x2-bng.jpeg)
ಕೋಲಾರ : ಜಿಲ್ಲೆಯ ಮಾಲೂರು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸಚಿವರಾದ ಮುನಿರತ್ನ, ಬೈರತಿ ಬಸವರಾಜ ಹಾಗೂ ಸಂಸದ ಮುನಿಸ್ವಾಮಿ ಆಸ್ಪತ್ರೆಗೆ ಭೇಟಿ ನೀಡಿ ಆರ್ಎಸ್ಎಸ್ ಮುಖಂಡ ರವಿಕುಮಾರ್ ಆರೋಗ್ಯ ವಿಚಾರಿಸಿ, ದೈರ್ಯ ಹೇಳಿದರು. ಮಾಲೂರು ಪಟ್ಟಣದ ಮಾರಿಕಾಂಬ ದೇವಾಲಯದ ಬಳಿ ಶನಿವಾರ ಆರ್ಎಸ್ಎಸ್ ಮುಖಂಡ ರವಿ ಅವರಿಗೆ ಅನ್ಯಕೋಮಿನ ಇಬ್ಬರು ವ್ಯಕ್ತಿಗಳು ಚಾಕುವಿನಿಂದ ಹಲ್ಲೆ ಮಾಡಿದ್ದರು. ಪಟ್ಟಣದಲ್ಲಿರುವ ರವಿ ಸ್ಟೀಲ್ ಅಂಗಡಿ ಎದುರು ಇಬ್ಬರು ವ್ಯಕ್ತಿಗಳು ಜಗಳ ಮಾಡಿಕೊಳ್ಳುತ್ತಿದ್ದಾಗ ಬಿಡಿಸಲು ಹೋಗಿದ್ದ ವೇಳೆ ಚಾಕುವಿನಿಂದ ಹಲ್ಲೆ ಮಾಡಲಾಗಿತ್ತು. ಈ ಸಂಬಂಧ ಮಾಲೂರು ಪೊಲೀಸರು ಓರ್ವ ಆರೋಪಿ ಸಯ್ಯದ್ ವಸೀಂ ಎಂಬುವರನ್ನು ಬಂಧಿಸಿದ್ದಾರೆ.