ಮಗ್ಗಿ ಹೇಳದ ಮಕ್ಕಳಿಗೆ ಮನಬಂದಂತೆ ಥಳಿಸಿದ ಶಿಕ್ಷಕ ಅಮಾನತು: ವಿಡಿಯೋ - EVT bharat kannada news
🎬 Watch Now: Feature Video
ಪದಗಳನ್ನು ಗುರುತಿಸಲಿಲ್ಲ ಎಂಬ ಕಾರಣಕ್ಕಾಗಿ ಮಧ್ಯಪ್ರದೇಶದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕನೊಬ್ಬ ಪುಟ್ಟ ಮಕ್ಕಳನ್ನು ಮನಸೋಇಚ್ಛೆ ಥಳಿಸಿದ್ದಾನೆ. ಮಕ್ಕಳನ್ನು ಒಬ್ಬೊಬ್ಬರನ್ನಾಗಿ ಕರೆದು ಮಗ್ಗಿ, ಪದಗಳನ್ನು ಗುರುತಿಸುವಂತೆ ಹೇಳಿದ್ದಾನೆ. ಮಕ್ಕಳು ತಪ್ಪಾಗಿ ಹೇಳಿದ್ದಕ್ಕೆ ಕ್ರುದ್ಧಗೊಂಡು ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಇದನ್ನು ಅಲ್ಲಿಯೇ ಇದ್ದವರು ವಿಡಿಯೋ ಮಾಡಿದ್ದಾರೆ. ವಿಷಯ ತಿಳಿದ ಶಿಕ್ಷಣಾಧಿಕಾರಿಗಳು ಮಕ್ಕಳ ಮೇಲೆ ದರ್ಪ ತೋರಿದ ಶಿಕ್ಷಕನನ್ನು ನೌಕರಿಯಿಂದ ಅಮಾನತು ಮಾಡಿದ್ದಾರೆ.