ಮೀನುಗಾರನಿಗೆ ಜಾಕ್ ಪಾಟ್: ಸುರತ್ಕಲ್ನಲ್ಲಿ ಬಲೆಗೆ ಬಿದ್ದ ರಾಶಿ ರಾಶಿ ಮೀನುಗಳು - ರಾಶಿ ರಾಶಿ ಮೀನು
🎬 Watch Now: Feature Video
ಮಂಗಳೂರು: ಸುರತ್ಕಲ್ನ ಗೊಡ್ಡೆಕೊಪ್ಲ ಕಡಲ ಕಿನಾರೆಯಲ್ಲಿ ಮೀನುಗಾರರೊಬ್ಬರು ಹಾಕಿದ ಕೈರಂಪಣಿ ಬಲೆಗೆ ರಾಶಿ ರಾಶಿ ಮೀನುಗಳು ಬಿದ್ದಿವೆ. ಜೀವನ್ ಪಿರೇರಾ ಎಂಬ ಮೀನುಗಾರ ಹಾಕಿರುವ ಬಲೆಗೆ ಬಂಗುಡೆ, ಕೊಡ್ಡಾಯಿ, ಕಲ್ಲೂರು ಮತ್ಸ್ಯಗಳ ಸಮೂಹವೇ ಸೆರೆಯಾಗಿದೆ. ಸುಮಾರು 400 ಕೆಜಿಯಷ್ಟು ಮೀನುಗಳು ಬಲೆಗೆ ಬಿದ್ದಿದ್ದು, ಮೀನುಗಾರನಿಗೆ ಅದೃಷ್ಟ ಲಕ್ಷ್ಮಿ ಒಲಿದಂತಾಗಿದೆ. ರಾಶಿ ರಾಶಿ ಮೀನುಗಳನ್ನು ಕಂಡ ಗ್ರಾಹಕರು ಖರೀದಿಗೆ ಮುಗಿಬಿದ್ದಿದ್ದಾರೆ.