ಉತ್ತರಾಖಂಡದಲ್ಲಿ ಭಾರಿ ಮಳೆ: ರಾಷ್ಟ್ರೀಯ ಹೆದ್ದಾರಿ 534 ಸಂಚಾರ ನಿರ್ಬಂಧ - ಉತ್ತರಾಖಂಡದ ಕೋಟ್‌ದ್ವಾರದ ನದಿಯಲ್ಲಿ ಭಾರೀ ಪ್ರವಾಹ
🎬 Watch Now: Feature Video
ಉತ್ತರಾಖಂಡ: ಉತ್ತರಾಖಂಡದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ಹಲವೆಡೆ ಉಂಟಾಗಿರುವ ಭೂಕುಸಿತದಿಂದ ರಸ್ತೆ ಸಂಚಾರಗಳು ಸ್ಥಗಿತಗೊಂಡಿದೆ. ಜೊತೆಗೆ ಇಲ್ಲಿನ ಕೋಟ್‌ದ್ವಾರದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಇಲ್ಲಿನ ನದಿಗಳು ಉಕ್ಕಿ ಹರಿಯುತ್ತಿದ್ದು, ಜನರನ್ನು ಭಯ ಭೀತಗೊಳಿಸಿದೆ. ಮಳೆಯಿಂದಾಗಿ ಕೆಲವೆಡೆ ರಾಷ್ಟ್ರೀಯ ಹೆದ್ದಾರಿಗಳು ಬಂದ್ ಆಗಿದ್ದು, ಸಾಕಷ್ಟು ಜನರು ತೊಂದರೆ ಅನುಭವಿಸುಂತಾಗಿದೆ. ದುಗಡ್ಡ-ಅಮಸೂರ್ ರಾಷ್ಟ್ರೀಯ ಹೆದ್ದಾರಿ 534ರಲ್ಲಿ ಸಂಚಾರ ಸ್ಥಗಿತಗೊಂಡಿದೆ. ಈ ಪರಿಸ್ಥಿತಿಯಲ್ಲಿ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.