ಸ್ಟಾಪ್ ದಿಸ್ ನಾನ್ಸೆನ್ಸ್: ಸಂಸದರಿಗೆ ತಿರುಗೇಟು ನೀಡಿದ ಎಸ್ಪಿ ಧರಣಿ ದೇವಿ - ಸಂಸದ ಮುನಿಸ್ವಾಮಿಗೆ ತಿರುಗೇಟು ನೀಡಿದ ಎಸ್ಪಿ ಧರಣಿ ದೇವಿ
🎬 Watch Now: Feature Video
ರಸ್ತೆ ಅಗಲೀಕರಣ ವಿಚಾರವಾಗಿ ಕೆಜಿಎಫ್ ಎಸ್ಪಿ ಧರಣಿ ದೇವಿ ಹಾಗೂ ಸಂಸದ ಎಸ್. ಮುನಿಸ್ವಾಮಿ ನಡುವೆ ವಾಗ್ವಾದ ನಡೆದಿದ್ದು, ವಾಗ್ವಾದದಲ್ಲಿ ಸ್ಟಾಪ್ ದಿಸ್ ನಾನ್ಸೆನ್ಸ್ ಎಂದು ಸಂಸದರಿಗೆ ತಿರುಗೇಟು ನೀಡಿದ ಪ್ರಸಂಗ ನಡೆಯಿತು. ಕೋಲಾರ ಜಿಲ್ಲೆ ಕೆಜಿಎಫ್ನ ಆಲದ ಮರದ ಬಳಿ ರಸ್ತೆ ಅಗಲೀಕರಣಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮಾರ್ಕ್ ಮಾಡಿದ್ದರು. ಆದರೆ, ಅಗಲೀಕರಣಕ್ಕೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದ ಹಿನ್ನೆಲೆ ಅಗಲೀಕರಣ ಕಾರ್ಯ ಸ್ಥಗಿತಗೊಂಡಿತ್ತು. ಇಂದು ಸಂಸದ ಎಸ್. ಮುನಿಸ್ವಾಮಿ ಅವರ ನೇತೃತ್ವದಲ್ಲಿ ಜೆಸಿಬಿಗಳ ಮೂಲಕ ತೆರವು ಕಾರ್ಯಕ್ಕೆ ಮುಂದಾಗಿದ್ದರು. ಆದರೆ, ವಿ. ಕೋಟೆ-ಬಂಗಾರಪೇಟೆ ಮುಖ್ಯರಸ್ತೆ ಒತ್ತುವರಿ ತೆರವು ಮಾಡುವ ವೇಳೆ ಪೊಲೀಸ್ ಇಲಾಖೆ ಯಾವುದೇ ರೀತಿಯ ಮಾಹಿತಿ ನೀಡದೆ ಅಗಲೀಕರಣ ಕೆಲಸಕ್ಕೆ ಮುಂದಾಗಿದ್ದರು. ಹೀಗಾಗಿ, ಸ್ಥಳಕ್ಕೆ ಆಗಮಿಸಿದ ಕೆಜಿಎಫ್ ಎಸ್ಪಿ ಧರಣಿ ದೇವಿ ಅವರು ಮಾಹಿತಿ ನೀಡದೆ ಏಕಾಏಕಿ ತೆರವು ಕಾರ್ಯಕ್ಕೆ ಮುಂದಾಗಿದ್ದರಿಂದ ವಿರೋಧ ವ್ಯಕ್ತಪಡಿಸಿದ್ರು. ಈ ವೇಳೆ ಎಸ್ಪಿ ಹಾಗೂ ಸಂಸದರ ನಡುವೆ ವಾಗ್ವಾದ ಉಂಟಾಯಿತು.