ವಿದ್ಯಾರ್ಥಿಗಳನ್ನು ಬೆನ್ನಟ್ಟಿದ ಬೀದಿ ನಾಯಿಗಳು.. ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ - ವಿದ್ಯಾರ್ಥಿಗಳನ್ನು ಬೆನ್ನಟ್ಟಿದ ಬೀದಿ ನಾಯಿಗಳು

🎬 Watch Now: Feature Video

thumbnail

By

Published : Sep 13, 2022, 7:38 AM IST

Updated : Sep 13, 2022, 8:03 AM IST

ಕಣ್ಣೂರು(ಕೇರಳ): ಕೇರಳದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ಶ್ವಾನಗಳ ಅಟ್ಟಹಾಸಕ್ಕೆ ಸಿಲುಕಿ ಕೆಲವರು ಸಾವನ್ನಪ್ಪಿದ್ದರೆ, ಇನ್ನೂ ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಮಧ್ಯೆ ವಿದ್ಯಾರ್ಥಿಗಳು ಮತ್ತು ಸ್ಥಳೀಯರನ್ನು ಬೀದಿನಾಯಿಗಳು ಬೆನ್ನಟ್ಟಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಭಯನಾಕವಾಗಿದೆ. ಈ ವೇಳೆ ಕೂದಲೆಳೆಯ ಅಂತರದಲ್ಲಿ ವಿದ್ಯಾರ್ಥಿಗಳು ಬಚಾವಾಗಿದ್ದಾರೆ. ಕೇರಳದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ ಎಂದು ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ವಿಚಾರಣೆ ನಡೆದಿತ್ತು. ಈ ವೇಳೆ ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಮತ್ತು ಜೆ.ಕೆ. ಮಹೇಶ್ವರಿ ಅವರನ್ನು ಒಳಗೊಂಡ ಪೀಠ ಬೀದಿ ನಾಯಿಗಳಿಗೆ ಆಹಾರ ಹಾಕಿದವರೇ ಅದರಿಂದ ಹಾನಿಯಾದವರಿಗೆ ಚಿಕಿತ್ಸೆ ವೆಚ್ಚವಬನ್ನು ಭರಿಸಬೇಕು ಎಂದು ಆದೇಶಿಸಿತ್ತು. ಕಣ್ಣೂರಿನಲ್ಲಿ ರೆಕಾರ್ಡ್​ ಆಗಿರುವ ಸಿಸಿಟಿವಿ ವಿಡಿಯೋದಲ್ಲಿ ವಿದ್ಯಾರ್ಥಿಗಳು ಓಡಿ ಬಂದು ಮನೆಯ ಗೇಟ್​ ಒಳಗೆ ಸೇರಿಕೊಂಡು ನಾಯಿಗಳಿಂದ ತಪ್ಪಿಸಿಕೊಂಡಿದ್ದಾರೆ. ಹಾಗೇ ಸ್ಥಳೀಯರೊಬ್ಬರು ಸಹ ನಾಯಿ ಕಚ್ಚುವುದರಿಂದ ತಪ್ಪಿಸಿಕೊಳ್ಳುವುದನ್ನು ವಿಡಿಯೋದಲ್ಲಿ ಕಾಣಬಹುದು.
Last Updated : Sep 13, 2022, 8:03 AM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.