ಶ್ರೀಗಳ ಅಗಲಿಕೆ ಸಾಧು ಸಂಕುಲಕ್ಕೆ ತುಂಬಲಾಗದ ನಷ್ಟ: ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು - kaginele_shri pays tribute to vishwesha theertha sri
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5531090-thumbnail-3x2-surya.jpg)
ಉಡುಪಿಯ ಪೇಜಾವರ ಶ್ರೀಗಳು ಕೃಷ್ಣೈಕ್ಯರಾಗಿದ್ದು ತೀವ್ರ ದುಃಖ ತಂದಿದೆ ಎಂದು ಕಾಗಿನಲೆ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ. ಕನಕ ಪೀಠದ ಲಿಂಗೈಕ್ಯ ಹಿರಿಯ ಶ್ರೀಗಳಿಗೂ ಹಾಗೂ ಪೇಜಾವರ ಶ್ರೀಗಳಿಗೂ ಅವಿನಾಭಾವ ಸಂಬಂಧವಿತ್ತು ಎಂದು ಸ್ಮರಸಿದ ಅವರು, ವಿಶ್ವದ ಅಖಂಡ ಭವ್ಯ ಭಾರತದ ಸಂಸ್ಕೃತಿ ಧರ್ಮದ ಬಗ್ಗೆ ಹೋರಾಟವನ್ನು ನಡೆಸಿಕೊಂಡು ಬಂದಿರುವಂತ ಶ್ರೀಗಳ ಅಗಲಿಕೆ ನಾಡಿಗೆ ಸಾಧು ಸಂಕುಲಕ್ಕೆ ತುಂಬಲಾಗದ ನಷ್ಟವಾಗಿದೆ. ಶ್ರೀಗಳ ಆತ್ಮಕ್ಕೆ ಶ್ರೀ ಕೃಷ್ಣ ಪರಮಾತ್ಮ ಚಿರಶಾಂತಿಯನ್ನು ಕರುಣಿಸಲೆಂದು ಪ್ರಾರ್ಥಿಸುತ್ತೇನೆ ಎಂದ್ರು.