Jabalpur Assault Video.. ಪೊಲೀಸ್ ನಿರ್ದಯಿಯಾಗಿ ವೃದ್ಧನಿಗೆ ಹಲ್ಲೆಮಾಡುತ್ತಿರುವ ವಿಡಿಯೋ ವೈರಲ್ - ಈಟಿವಿ ಭಾರತ್ ಕನ್ನಡ
🎬 Watch Now: Feature Video
ಜಬಲ್ಪುರ್(ಮಧ್ಯಪ್ರದೇಶ): ಪೊಲೀಸನೊಬ್ಬ ನಿರ್ದಯಿಯಾಗಿ ವೃದ್ಧನಿಗೆ ಹಲ್ಲೆಮಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋ ಜಬಲ್ಪುರ್ ರೈಲ್ವೆ ಸ್ಟೇಷನ್ನದ್ದು ಎಂದು ಹೇಳಲಾಗುತ್ತಿದೆ. ಈ ಹಲ್ಲೆಯ ಹಿಂದಿನ ಕಾರಣ ತಿಳಿದು ಬಂದಿಲ್ಲ. ಪೊಲೀಸ್ ವೃದ್ಧನನ್ನು ಒದೆಯುತ್ತಿದ್ದು, ನಂತರ ಪ್ಲಾಟ್ಫಾರಂ ಕಟ್ಟೆಯ ಕೊನೆಯ ವರೆಗೆ ಎಳೆದು ಕೊಂಡು ಹೋಗಿ ಮತ್ತೆ ಥಳಿಸುತ್ತಿರುವುದು ಕಾಣುತ್ತದೆ. ಪಕ್ಕದ ಪ್ಲಾಟ್ಫಾರಂನ ರೈಲಿನಿಂದ ಪ್ರಯಾಣಿಕರೊಬ್ಬರು ವಿಡಿಯೋ ಮಾಡಿದ್ದು, ಈಗ ವೈರಲ್ ಆಗಿದೆ. ವಿಡಿಯೋ ವೈರಲ್ ಆದ ನಂತರ ಮಧ್ಯಪ್ರದೇಶದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.