ಪ್ರಧಾನಿ ಜೊತೆ ಯೋಗ ಮಾಡಿದ್ದು ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ: ಯೋಗಪಟು - International Yoga Day celebrated in the Mysore Palace courtyard
🎬 Watch Now: Feature Video
ಮೈಸೂರು ಅರಮನೆ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಇಂದು (ಮಂಗಳವಾರ) ಆಚರಿಸಲಾಯಿತು. ಈ ಬಗ್ಗೆ ಯೋಗಪಟು ರಕ್ಷಾ ಮಾತನಾಡಿ, "ಪ್ರಧಾನಿಯವರು ಭಾಗವಹಿಸಿರುವ ಯೋಗ ದಿನ ಹಿಸ್ಟಾರಿಕಲ್ ಮೂಮೆಂಟ್. ಇಂತಹ ದಿನ ಜೀವನದಲ್ಲಿ ಮತ್ತೆ ಬರಲು ಸಾಧ್ಯವಿಲ್ಲ. ನಾವು ಮೋದಿಯವರೊಟ್ಟಿಗೆ ಯೋಗ ಮಾಡುತ್ತೇವೆ ಎಂದುಕೊಂಡಿರಲಿಲ್ಲ. ಕೊನೆ ಘಳಿಗೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಪಾಸ್ ಸಿಕ್ಕಿತು. ಅಲ್ಲಿಯವರೆಗೂ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಎಂಬ ನಂಬಿಕೆಯೇ ಇರಲಿಲ್ಲ. ಈ ಕ್ಷಣವನ್ನು ನನ್ನ ಜೀವನದಲ್ಲಿ ಎಂದಿಗೂ ಮರೆಯಲು ಸಾಧ್ಯವಿಲ್ಲ" ಎಂದರು.