ಕುಮಟಾದಲ್ಲಿ ಹೆಚ್ಚುತ್ತಿರುವ ಗೋ ಕಳ್ಳತನ; ಕಾರಲ್ಲಿ ಬಂದು ಗೋ ತುಂಬುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ! - ಕಾರಲ್ಲಿ ಬಂದು ಗೋ ತುಂಬುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ
🎬 Watch Now: Feature Video
ಕಾರವಾರ: ತಡರಾತ್ರಿ ಕಾರಿನಲ್ಲಿ ಆಗಮಿಸಿ ಕದೀಮರು ರಸ್ತೆಯಲ್ಲಿ ಮಲಗಿದ್ದ ಗೋವುಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾದ ಘಟನೆ ಕುಮಟಾದಲ್ಲಿ ನಡೆದಿದ್ದು, ಈ ದೃಶ್ಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ. ತಡರಾತ್ರಿ 1 ಗಂಟೆ ವೇಳೆಗೆ ಪಟ್ಟಣದ ರಥಬೀದಿಯ ಶ್ರೀ ಆಂಜನೇಯ ದೇವಸ್ಥಾನದ ಬಳಿ ಸಂಚರಿಸಿದ ಸ್ವಿಫ್ಟ್ ಡಿಸೈರ್ ಕಾರು ರಸ್ತೆಯಲ್ಲಿ ಗೋವುಗಳು ಮಲಗಿದ್ದನ್ನ ಕಂಡು ನಿಲ್ಲಿಸಿದೆ. ಬಳಿಕ ಅದರಿಂದ ಕೆಳಗಿಳಿದ ಮೂವರು ಗೋಕಳ್ಳರು ಕರುವೊಂದನ್ನು ಕಾರಿನಲ್ಲಿ ತುಂಬಿಕೊಂಡು ಪರಾರಿಯಾಗಿದ್ದು ಸಿಸಿಕ್ಯಾಮೆರಾವೊಂದರಲ್ಲಿ ಈ ದೃಶ್ಯಗಳು ಸೆರೆಯಾಗಿವೆ.