ಹಂಪಿ ಸ್ಮಾರಕಗಳಿಗೆ ವಿದ್ಯುತ್ ದೀಪಾಲಂಕಾರ: ಮದುವಣಗಿತ್ತಿಯಂತೆ ಕಂಗೊಳಿಸುತ್ತಿದೆ ಕಲ್ಲಿನ ರಥ - ಸಪ್ತಸ್ವರ ಮಂಟಪ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16066553-thumbnail-3x2-vny.jpg)
ಹಂಪಿ(ಬಳ್ಳಾರಿ): 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆ ವಿಶ್ವ ಪ್ರಸಿದ್ಧ ಹಂಪಿಯ ಸ್ಮಾರಕಗಳಿಗೆ ಕೇಸರಿ, ಬಿಳಿ, ಹಸಿರು(ರಾಷ್ಟ್ರ ಧ್ವಜ) ಬಣ್ಣಗಳ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಕೆಲ ಸ್ಮಾರಕಗಳು ವಿದ್ಯುತ್ ದೀಪದಿಂದ ಸೌಂದರ್ಯ ಹೆಚ್ಚಿಸಿಕೊಂಡೆರೆ, ಕಲ್ಲಿನರಥದ ವಿದ್ಯುತ್ ದೀಪಾಲಂಕರ ನೋಡುಗರ ಕಣ್ಮನ ಸೆಳೆಯುತ್ತಿದೆ. ವಿರೂಪಾಕ್ಷ ದೇವಸ್ಥಾನ, ವಿಜಯ ವಿಠಲ ದೇಗುಲದ ಪ್ರಾಂಗಣದಲ್ಲಿರುವ ಕಲ್ಲಿನ ತೇರು, ಸಂಗೀತವನ್ನು ಹೊರಹೊಮ್ಮಿಸುವ ಸಪ್ತಸ್ವರ ಮಂಟಪ, ಕಡಲೆ ಕಾಳು ಗಣಪ, ಸಾಸಿವೆ ಕಾಳು ಗಣಪ, ಕಂಗೊಳಿಸುತ್ತಿವೆ. ಕಲರ್ಫುಲ್ ಲೈಟಿಂಗ್ ನಲ್ಲಿರೋ ಹಂಪಿಯ ಸೌಂದರ್ಯ ದ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ.