ಭೋರ್ಗರೆವ ಹಳ್ಳದಲ್ಲೇ ಹಾಲಸಿದ್ಧನಾಥನ ಪಲ್ಲಕ್ಕಿ ಹೊತ್ತು ಸಾಗಿದ ಭಕ್ತರು - ಹಾಲಸಿದ್ಧನಾಥ ಜಾತ್ರೆ
🎬 Watch Now: Feature Video
ಬೆಳಗಾವಿ: ಭೋರ್ಗರೆಯುತ್ತಿರುವ ಹಳ್ಳದಲ್ಲೇ ಸಾವಿರಾರು ಭಕ್ತರು ಹಾಲಸಿದ್ಧನಾಥನ ಪಲ್ಲಕ್ಕಿ ಹೊತ್ತು ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕುರ್ಲಿ ಗ್ರಾಮದಿಂದ ಅಪ್ಪಾಚಿವಾಡಿ ಗ್ರಾಮಕ್ಕೆ ಸಾಗಿದರು. ಪ್ರತಿ ವರ್ಷ ಹಾಲಸಿದ್ಧನಾಥ ಜಾತ್ರೆ ವೇಳೆ ಅಪ್ಪಾಚಿವಾಡಿಗೆ ಕುರ್ಲಿ ಗ್ರಾಮದಿಂದ ಪಲ್ಲಕ್ಕಿ ಸಾಗಿಸಲಾಗುತ್ತದೆ. ಬಳಿಕ ಎರಡೂ ಗ್ರಾಮದ ಜನರು ಸೇರಿ ಐದು ದಿನಗಳ ಕಾಲ ಅದ್ಧೂರಿಯಾಗಿ ಜಾತ್ರೆ ಮಾಡುತ್ತಾರೆ. ಈ ಎರಡು ಗ್ರಾಮದ ಮಧ್ಯೆ ಗುಮ್ಮಟ ಹಳ್ಳ ಹರಿಯುತ್ತದೆ. ಈ ಹಳ್ಳ ವೇದಗಂಗಾ ನದಿಯ ಸಮೀಪವಿದೆ. ಕಳೆದ ಎರಡು ದಿನಗಳಿಂದ ಬೆಳಗಾವಿ ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಜೋರಾಗಿದ್ದು, ನೀರಿನ ಹರಿವು ಹೆಚ್ಚಾಗಿದೆ. ಆದ್ರೆ ಜಾತ್ರೆ ಹಿನ್ನೆಲೆಯಲ್ಲಿ ಭೋರ್ಗರೆಯುವ ಹಳ್ಳದಲ್ಲೇ ಪಲ್ಲಕ್ಕಿ ಒಯ್ಯಲಾಯಿತು. ಮಹಿಳೆಯರು ಆರತಿ ಹಿಡಿದು ಹಳ್ಳ ದಾಟಿದ್ದು ವಿಶೇಷವಾಗಿತ್ತು. ಸಾವಿರಾರು ಜನ ಪಲ್ಲಕ್ಕಿ ಜೊತೆಗೆ ಹೆಜ್ಜೆ ಹಾಕಿದರು.