201 ಡಜನ್ ಬಾಳೆಹಣ್ಣಿನಲ್ಲಿ ಉದ್ಭವವಾದ ಗಣಪತಿ: ವಿಡಿಯೋ - Ganesh Festival 2022
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16261500-thumbnail-3x2-wdfdfd.jpg)
ಕೊಲ್ಹಾಪುರ(ಮಹಾರಾಷ್ಟ್ರ): ದೇಶದೆಲ್ಲೆಡೆ ಗಣೇಶೋತ್ಸವ ಅದ್ಧೂರಿಯಾಗಿ ನಡೆಯುತ್ತಿದ್ದು ನಾನಾ ರೂಪಗಳಲ್ಲಿ ವಿನಾಯಕನ ಪ್ರತಿಷ್ಠಾಪನೆ ಮಾಡಲಾಗಿದೆ. ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ವಿಭಿನ್ನ ಗಣಪತಿ ಮೂರ್ತಿ ಕಂಡುಬಂದಿದೆ. ಕಳೆದ 25 ವರ್ಷಗಳಿಂದ ಇಲ್ಲಿನ ಅಜರಾದಲ್ಲಿ ವಿಶಿಷ್ಟ ಗಣೇಶನ ಮೂರ್ತಿ ತಯಾರಿಸಲಾಗ್ತಿದೆ. ಈ ಸಲ 201 ಡಜನ್ ಬಾಳೆಹಣ್ಣುಗಳಿಂದ 11 ಅಡಿ ಎತ್ತರದ ಸುಂದರ ಮೂರ್ತಿ ಕೂರಿಸಲಾಗಿದೆ. ಮೂರ್ತಿ ತಯಾರಿಕೆಯಲ್ಲಿ 1001 ತೆಂಗಿನಕಾಯಿಗಳನ್ನೂ ಬಳಸಲಾಗಿದೆ.