ಮುಂಬೈನಲ್ಲಿ ಗಣೇಶ ಮೂರ್ತಿಗಳ ಅದ್ಧೂರಿ ನಿಮಜ್ಜನ: ವಿಡಿಯೋ ನೋಡಿ - Etv bharat kannada
🎬 Watch Now: Feature Video
ಮುಂಬೈ(ಮಹಾರಾಷ್ಟ್ರ): ಮಹಾರಾಷ್ಟ್ರದ ಮುಂಬೈ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಇಂದು ಬೆಳಗ್ಗೆಯಿಂದಲೇ ಗಣೇಶ ಮೂರ್ತಿಗಳ ನಿಮಜ್ಜನ ಕಾರ್ಯ ಸಡಗರ, ಸಂಭ್ರಮದಿಂದ ನಡೆಯುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಸೇರಿರುವ ಜನರು ವಿಘ್ನ ನಿವಾರಕನಿಗೆ ಅಂತಿಮ ವಿದಾಯ ಹೇಳುತ್ತಿದ್ದಾರೆ. ಜನರು ಡಿಜೆ ಹಾಡಿಗೆ ಕುಣಿದು ಕುಪ್ಪಳಿಸುತ್ತಿದ್ದಾರೆ. ಶ್ರದ್ಧಾಭಕ್ತಿಯಿಂದ ವಿಗ್ರಹಗಳ ನಿಮಜ್ಜನ ಕಾರ್ಯ ನಡೆಯುತ್ತಿದೆ. ಭದ್ರತೆಗಾಗಿ 3,200 ಪೊಲೀಸ್ ಅಧಿಕಾರಿಗಳು, 15,500 ಕಾನ್ಸ್ಸ್ಟೇಬಲ್ ಸೇರಿದಂತೆ ಎಸ್ಆರ್ಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.