ಜೀಪ್​ನಲ್ಲಿ ಹೋಗ್ತಿದ್ದಾಗ ದಿಢೀರ್ ಪ್ರತ್ಯಕ್ಷವಾದ ಆನೆ.. 'ಹೋಗು ವಿನಾಯಕ' ಎಂದು ಮನವಿ ! - ದಿಢೀರ್​ ಆಗಿ ಪ್ರತ್ಯಕ್ಷವಾದ ಆನೆ

🎬 Watch Now: Feature Video

thumbnail

By

Published : May 4, 2022, 9:12 PM IST

ಈರೋಡ್​​(ತಮಿಳುನಾಡು): ಸತ್ಯಮಂಗಲದ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಅನೇಕ ಆನೆಗಳು, ಕಾಡು ಪ್ರಾಣಿಗಳಿವೆ. ಇಲ್ಲಿ ಕಡಂಬೂರಿನಿಂದ ಗುಂಡ್ರಿಗೆ ಹೋಗಲು ರಸ್ತೆ ಮಾರ್ಗವಿದೆ. ಇದರ ಮೂಲಕ ನಾಲ್ವರು ಜೀಪ್​ನಲ್ಲಿ ತೆರಳುತ್ತಿದ್ದ ವೇಳೆ ದಿಢೀರ್​ ಆಗಿ ಒಂಟಿ ಸಲಗವೊಂದು ಕಾಣಿಸಿಕೊಂಡಿದೆ. ಇದನ್ನು ನೋಡಿರುವ ಜನರು ಹೆದರಿದ್ದು, ಹೋಗು ಗಜರಾಜ ಎಂದು ಕನ್ನಡದಲ್ಲೇ ಮನವಿ ಮಾಡಿದ್ದಾರೆ. ಅದೃಷ್ಟವಶಾತ್​ ಅದು ಯಾವುದೇ ರೀತಿಯ ತೊಂದರೆ ಮಾಡದೇ ಸುಮ್ಮನೆ ತೆರಳಿದೆ. ಇದರ ವಿಡಿಯೋ ವ್ಯಕ್ತಿಯೋರ್ವನ ಮೊಬೈಲ್​​ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.