ಮದ್ಯದ ಗಮ್ಮತ್ತು.. ನಶೆಯಲ್ಲಿ ವಿದ್ಯುತ್ ಕಂಬ ಏರಿದ ವ್ಯಕ್ತಿ - ಮುಂದೇನಾಯ್ತು ವಿಡಿಯೋ ನೋಡಿ - ಮಹಾರಾಷ್ಟ್ರದ ಕುಡುಕ
🎬 Watch Now: Feature Video
ಈ ಮದ್ಯಪ್ರಿಯರ ಸಹವಾಸವೇ ಹೀಗೆ. ಮತ್ತಿನ ಪರಮಾತ್ಮ ಆಡಿಸದಂತೆ ಆಡಲು ಹೋಗಿ ಉಳಿದವರನ್ನು ಪೇಚಿಗೆ ಸಿಕ್ಕಿಹಾಕಿಸುತ್ತಾರೆ. ಈ ರೀತಿಯ ಘಟನೆ ಮಹಾರಾಷ್ಟ್ರದ ಸಾಂಗ್ಲಿಯ ತಾಸಗಾಂವ್ ನಗರದಲ್ಲಿ ನಡೆದಿದೆ. ರಾತ್ರಿ 8 ಗಂಟೆ ಸುಮಾರಿನಲ್ಲಿ ಮದ್ಯ ಸೇವಿಸಿದ್ದ ವ್ಯಕ್ತಿಯೊಬ್ಬ ವಿದ್ಯುತ್ ಕಂಬ ಹತ್ತಿ ಅದರ ವೈಯರ್ಗಳನ್ನು ಹಿಡಿದು ಜೋತು ಬಿದ್ದಿದ್ದಾನೆ. ಜನರು ಆತನನ್ನು ಇಳಿಸಲು ಪ್ರಯತ್ನಿಸಿದರೂ ಆ ವ್ಯಕ್ತಿ ಮಾತ್ರ ಕ್ಯಾರೇ ಅಂದಿಲ್ಲ. ಈ ವೇಳೆ ಪೊಲೀಸ್ ತಂಡ ಸ್ಥಳಕ್ಕಾಗಮಿಸಿ ಆ ಕುಡುಕನನ್ನು ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈತನಿಗಾಗಿ ನಗರದಲ್ಲಿ ವಿದ್ಯುತ್ ಬಂದ್ ಮಾಡಲಾಗಿತ್ತು.