100 ಅಡಿ ಆಳದ ಬಾವಿಗೆ ಬಿದ್ದ ಎಮ್ಮೆ ರಕ್ಷಿಸಲು ಹೋಗಿ ಸಾವನ್ನಪ್ಪಿದ ಯುವಕ.. ವಿಡಿಯೋ - Death of a young man
🎬 Watch Now: Feature Video
ವಡೋದರಾ(ಗುಜರಾತ್): 100 ಅಡಿ ಆಳದ ಬಾವಿಯಲ್ಲಿ ಬಿದ್ದಿದ್ದ ಎಮ್ಮೆಯ ರಕ್ಷಣೆ ಮಾಡಲು ಹೋದ ಯುವಕನೊಬ್ಬ ಮೃತಪಟ್ಟಿದ್ದಾನೆ. ವಡೋದರಾದ ದೇಸರ್ ತೆಹಸಿಲ್ನ ವೆಜ್ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದಲ್ಲಿನ ಬಾವಿ ಮುಚ್ಚಲು ಅದರ ಮೇಲೆ ಸಿಮೆಂಟ್ ಸೀಟ್ ಮುಚ್ಚಲಾಗಿತ್ತು. ಅದರ ಮೇಲೆ ಎಮ್ಮೆ ನಿಂತಿದ್ದ ವೇಳೆ ಮುರಿದು ಹೋಗಿದ್ದು, ಬಾವಿಯೊಳಗೆ ಬಿದ್ದಿದೆ. ಎಮ್ಮೆ ಬಿದ್ದಿರುವ ಸದ್ದು ಕೇಳಿ ಗ್ರಾಮಸ್ಥರು ಅಲ್ಲಿ ಜಮಾವಣೆಗೊಂಡಿದ್ದಾರೆ. ಈ ವೇಳೆ ಅದರ ರಕ್ಷಣೆ ಮಾಡಲು ಯುವಕನೊಬ್ಬ ಬಾವಿಯೊಳಗೆ ಇಳಿದಿದ್ದಾನೆ. ಅದರ ರಕ್ಷಣೆ ಮಾಡಲು ಮುಂದಾಗಿರುವ ವೇಳೆ ಸುಮಾರು 40 ಅಡಿ ದೂರದಲ್ಲಿ ಹಗ್ಗ ತುಂಡಾಗಿ ಬಿದ್ದಿದ್ದು, ಎಮ್ಮೆ ಜೊತೆಗೆ ಯುವಕ ಸಹ ಸಾವನ್ನಪ್ಪಿದ್ದಾನೆ.