ದಾವಣಗೆರೆ ಹಿಂದೂ ಮಹಾಸಭಾ ಗಣೇಶ ನಿಮಜ್ಜನದಲ್ಲಿ 5 ಲಕ್ಷ ಜನ: ಡಿಜೆ ಸದ್ದಿಗೆ ಯುವತಿಯರಿಂದ ಮಸ್ತ್ ಡ್ಯಾನ್ಸ್ - ಹೈಸ್ಕೂಲ್ ಮೈದಾನದಿಂದ ಪ್ರಾರಂಭವಾದ ಬೃಹತ್ ಮೆರವಣಿಗೆ
🎬 Watch Now: Feature Video
ದಾವಣಗೆರೆ: ನಗರದಲ್ಲಿ ಹಿಂದೂ ಮಹಾಸಭಾ ಗಣೇಶ ನಿಮಜ್ಜನ ಸಂಭ್ರಮಕ್ಕೆ ಲಕ್ಷಾಂತರ ಜನ ಸಾಕ್ಷಿಯಾದರು. ದಾವಣಗೆರೆಯ ಹೈಸ್ಕೂಲ್ ಮೈದಾನದಿಂದ ಪ್ರಾರಂಭವಾದ ಬೃಹತ್ ಮೆರವಣಿಗೆಗೆ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಲೋಕಿಕೆರೆ ನಾಗರಾಜ್, ಮಾಜಿ ಮೇಯರ್ ಬಿ ಜಿ ಅಜಯಕುಮಾರ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾದವ್ ಸೇರಿ ಹಲವರು ಚಾಲನೆ ನೀಡಿದರು. ಹತ್ತಾರು ಡಿಜೆ ಸೌಂಡ್ಗಳ ಸದ್ದಿಗೆ ಯುವಕ ಯುವತಿಯರು ಹುಚ್ಚೆದ್ದು ಕುಣಿದ್ರು. ಮೆರವಣಿಗೆಯಲ್ಲಿ ಸುಮಾರು ಐದು ಲಕ್ಷಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು.ಅಲ್ಲದೆ ಮೆರವಣಿಗೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಇನ್ನು ಮೆರವಣಿಗೆಯಲ್ಲಿ ಸಾವರ್ಕರ್ ಫೋಟೋಗಳು ರಾರಾಜಿಸಿದವು.