ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಚ್ಚು: ಕಲಬುರಗಿಯಲ್ಲಿ ​ಪಂಜಿನ ಮೆರವಣಿಗೆ - priyanka kharge protest in kalaburgi

🎬 Watch Now: Feature Video

thumbnail

By

Published : Jun 16, 2022, 9:36 AM IST

ಕಲಬುರಗಿ: ರಾಜ್ಯ ಸರ್ಕಾರದ ಜನವಿರೋಧಿ ನೀತಿ, ಪಠ್ಯಪುಸ್ತಕದಲ್ಲಿ ಮಹನೀಯರ ಅವಹೇಳನ ಹಾಗೂ ಅಪರಿಮಿತ ಭ್ರಷ್ಟಾಚಾರದ ವಿರುದ್ಧ ಜಿಲ್ಲಾ ಕಾಂಗ್ರೆಸ್ ಹಾಗೂ ಯೂಥ್ ಕಾಂಗ್ರೆಸ್ ವತಿಯಿಂದ ಪಂಜಿನ ಮೆರವಣಿಗೆ ನಡೆಸಲಾಯಿತು. ಪಠ್ಯಪುಸ್ತಕಗಳನ್ನು ವಾಪಸ್ ಪಡೆಯುವವರೆಗೆ ಕಾಂಗ್ರೆಸ್ ಹೋರಾಟ ನಿಲ್ಲುವುದಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು. ಕರ್ನಾಟಕದ ಅಸ್ಮಿತೆ ಉಳಿಸಲು ಅಹೋರಾತ್ರಿ ಧರಣಿ ಕೈಗೊಂಡಿರುವ ಸಂದರ್ಭದಲ್ಲಿ ಜನಪರ ಹೋರಾಟಗಾರರು, ಕವಿ ಸಾಹಿತಿಗಳು, ಪ್ರಗತಿಪರ ಚಿಂತಕರು, ದಲಿತ ಪರ ಸಂಘಟನೆಕಾರರು, ಕನ್ನಡಪರ ಹಾಗೂ ರೈತಪರ ಹೋರಾಟಗಾರರು, ಹಲವಾರು ಸಮಾಜದ ಮುಖಂಡರು ಭಾಗವಹಿಸಿ ತಮ್ಮ ಬೆಂಬಲ ಸೂಚಿಸಿದರು. ಶಾಸಕರಾದ ಪ್ರಿಯಾಂಕ್ ಖರ್ಗೆ, ಅಜಯ್​ ಸಿಂಗ್, ಮಾಜಿ ಸಚಿವ ಶರಣಪ್ರಕಾಶ ಪಾಟೀಲ್, ಜಗದೇವ ಗುತ್ತೇದಾರ, ಯೂಥ್ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್ ಹೊನಗುಂಟಿಕರ್ ಸೇರಿ ಕಾಂಗ್ರೆಸ್ ಪಕ್ಷದ ಹಲವು ಮುಖಂಡರು ಭಾಗವಹಿಸಿದ್ದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.