ಜಿಂದಾಲ್ ಕಾರ್ಖಾನೆಗೆ ಲಾಕ್ ಡೌನ್ ವಿನಾಯಿತಿ ಏಕೆ: ಜಿಲ್ಲಾಧಿಕಾರಿ ನಕುಲ್ ಸ್ಪಷ್ಟನೆ ಹೀಗಿದೆ - ಜಿಲ್ಲಾಧಿಕಾರಿ ಎಸ್ ಎಸ್ ನಕುಲ್
🎬 Watch Now: Feature Video
ಬಳ್ಳಾರಿ: ಮೆಂಟೇನನ್ಸ್ ಇಂಡಸ್ಟ್ರೀಸ್ ಲಾಕ್ ಡೌನ್ ಗೆ ಕೇಂದ್ರ ಸರ್ಕಾರ ವಿನಾಯಿತಿ ನೀಡಿದೆ ಎಂದು ಜಿಲ್ಲಾಧಿಕಾರಿ ಎಸ್. ಎಸ್. ನಕುಲ್ ತಿಳಿಸಿದ್ದಾರೆ. ತಮ್ಮ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಜಿಂದಾಲ್ ಉಕ್ಕು ಕಾರ್ಖಾನೆ ಲಾಕ್ ಡೌನ್ ಯಾಕಿಲ್ಲ ಎಂಬ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಕೇಂದ್ರ ಸರ್ಕಾರದ ಆದೇಶ ಪ್ರತಿ ಹಿಡಿದುಕೊಂಡೇ ಮೆಂಟೇನನ್ಸ್ ಇಂಡಸ್ಟ್ರೀಸ್ ಗೆ ಲಾಕ್ ಡೌನ್ ಅನ್ವಯಿಸುವುದಿಲ್ಲ ಎಂಬ ಅಂಶವನ್ನು ಈ ಆದೇಶದಲ್ಲಿ ಸ್ಪಷ್ಟವಾಗಿ ಕೇಂದ್ರ ಸರ್ಕಾರ ಸೂಚಿಸಿದೆ. ಆ ಹಿನ್ನಲೆಯಲ್ಲಿ ಜಿಂದಾಲ್ ಲಾಕ್ ಡೌನ್ ಗೆ ವಿನಾಯಿತಿ ನೀಡಲಾಗಿದೆ ಎಂದರು.