ವಿಡಿಯೋ: ವಿವಾದಿತ ಗಡ್ಡ, ಮೀಸೆ ತಮಾಷೆಗೆ ಕ್ಷಮೆ ಕೋರಿದ ಹಾಸ್ಯ ನಟಿ ಭಾರತಿ ಸಿಂಗ್ - bharati singh beard and mustache comedy
🎬 Watch Now: Feature Video
ನವದೆಹಲಿ: ಹಾಸ್ಯ ನಟಿ, ನಿರೂಪಕಿ ಭಾರತಿ ಸಿಂಗ್ ಕಾರ್ಯಕ್ರಮವೊಂದರಲ್ಲಿ ಗಡ್ಡ, ಮೀಸೆಯ ಬಗ್ಗೆ ಮಾಡಿದ ತಮಾಷೆ ವಿವಾದದ ಸ್ವರೂಪ ಪಡೆದುಕೊಂಡಿದೆ. ಪಂಜಾಬ್ ಸಮುದಾಯದ ಜನರನ್ನೇ ಗುರಿಯಾಗಿಸಿಕೊಂಡು ಭಾರತಿ ಸಿಂಗ್ ಈ ಹೇಳಿಕೆ ನೀಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದಕ್ಕೆ ನಟಿ ಭಾರತಿ ಸಿಂಗ್ ಸ್ಪಷ್ಟನೆ ನೀಡಿದ್ದಲ್ಲದೇ, ಕ್ಷಮೆ ಕೋರಿದ್ದಾರೆ. ನನ್ನ ಹೇಳಿಕೆ ತಮಾಷೆಯಾಗಿತ್ತೇ ಹೊರತು ಯಾವುದೇ ಧರ್ಮಿಯರು ಅಥವಾ ಜಾತಿಯವರನ್ನು ಅಪಹಾಸ್ಯ ಮಾಡಲು ಅಲ್ಲ. ಅದರಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ ಎಂದು ಕೇಳಿಕೊಂಡಿದ್ದಾರೆ.