ವಿಡಿಯೋ: ವೇದ ಮಂತ್ರಗಳ ನಡುವೆ ಸಾಗಿದ ಛಾರಿ ಮುಬಾರಕ್ ಯಾತ್ರೆ - Shri Budha Amarnath
🎬 Watch Now: Feature Video
ಜಮ್ಮು: ಪಹಲ್ಗಾಮ್ ಮಾರ್ಗದ ಮೂಲಕ ಮಂಗಳವಾರ ಪೂಂಚ್ ಜಿಲ್ಲೆಯ ಬುಧ ಅಮರನಾಥನ ಗುಹಾ ದೇಗುಲಕ್ಕೆ ಭಗವಾನ್ ಶಿವನ ಪವಿತ್ರ ಗದೆ 'ಛಾರಿ ಮುಬಾರಕ್' ಅನ್ನು ಕೊಂಡೊಯ್ಯಲಾಯಿತು. ಸಾಂಪ್ರದಾಯಿಕ 'ಛಾರಿ ಮುಬಾರಕ್' ಮೆರವಣಿಗೆಗೆ (ಭಗವಾನ್ ಶಿವನ ಪವಿತ್ರ ದಂಡದ ಯಾತ್ರೆ) ಹಿಮಾಲಯ ಮಾರ್ಗದಲ್ಲಿ ತೆರಳಿತು. ಆಚಾರ್ಯ ಶ್ರೀ ಶ್ರೀ ಮಹಾಮಂಡಲೇಶ್ವರ ಸ್ವಾಮಿ ವಿಶ್ವಾತ್ಮಾನಂದ ಸರಸ್ವತಿ ಮಹಾರಾಜ್ ನೇತೃತ್ವದಲ್ಲಿ ಅಖಾರ ಮಂದಿರದಲ್ಲಿ ವೇದ ಮಂತ್ರಗಳ ಪಠಣಗಳ ನಡುವೆ ವಿಶೇಷ ಪೂಜೆ ಮತ್ತು ಹವನ ಮಾಡಿದ ನಂತರ ಯಾತ್ರೆ ಪ್ರಾರಂಭವಾಯಿತು. ಈ ವೇಳೆ, ಡೆಪ್ಯುಟಿ ಕಮಿಷನರ್ ಇಂದರ್ ಜೀತ್, ಡಿಐಜಿ ರಾಜೌರಿ ಪೂಂಚ್ ರೇಂಜ್, ಡಾ. ಮೊಹಮ್ಮದ್ ಹಸೀಬ್ ಮುಘಲ್ ಮತ್ತು ಎಸ್‌ಎಸ್‌ಪಿ ರೋಹಿತ್ ಬಾಸ್ಕೊತ್ರಾ ಮತ್ತು ಮಾಜಿ ಶಾಸಕ ರವೀಂದರ್ ರೈನಾ ಉಪಸ್ಥಿತರಿದ್ದರು.