ಕಾರಿನ ಡೋರ್ ತೆಗೆದು ಸ್ಟಂಟ್: ನಿಯಂತ್ರಣ ತಪ್ಪಿ ಪಕ್ಕದ ರಸ್ತೆಗೆ ನುಗ್ಗಿದ ಕಾರು - driver escaped with minor injuries
🎬 Watch Now: Feature Video
ಸೊಲಾನ್ (ಹಿಮಾಚಲ ಪ್ರದೇಶ): ಚಲಿಸುತ್ತಿರುವ ಕಾರಿನಲ್ಲಿ ಚಾಲಕನ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿ ಮಾಡಿದ ಹುಚ್ಚಾಟದಿಂದ ಅಪಘಾತವಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಹಂಚಲ್ಪಡುತ್ತಿದ್ದು, ಯುವಕನ ಹುಚ್ಚಾಟಕ್ಕೆ ಜನರು ಹಳಿಯುತ್ತಿದ್ದಾರೆ. ಡ್ರೈವರ್ ಪಕ್ಕದಲ್ಲಿ ಕುಳಿತಿರುವ ವ್ಯಕ್ತಿ ಬಲ ಬದಿಯ ಬಾಗಿಲು ತೆಗೆದು ಸ್ಟಂಟ್ ಮಾಡುತ್ತಿದ್ದಾನೆ. ಇದರಿಂದ ಚಾಲಕನಿಗೆ ನಿಯಂತ್ರಣ ತಪ್ಪಿ ಡಿವೈಡರ್ ಹತ್ತಿ ಪಕ್ಕದ ರಸ್ತೆಗೆ ಕಾರು ಹೋಗಿದೆ. ಪಕ್ಕದ ರಸ್ತೆಯ ಅಂಚಿನ ತೆಡೆ ಗೋಡೆಗೆ ಕಾರು ಗುದ್ದಿದೆ. ಈ ವಿಡಿಯೋವನ್ನು ಹಿಂದೆ ಬರುತ್ತಿದ್ದ ಕಾರಿನವರು ಸೆರೆ ಹಿಡಿದಿದ್ದು, ಸಾಮಾಜಿಕ ಜಾತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ನೋಡಿ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ ಎಂದು ತಿಳಿದು ಬಂದಿದೆ.