ಮಂಗಳೂರು: ಪಾರ್ಕಿಂಗ್ ಮಾಡಿದ್ದ ಕಾರು, ಜೀಪ್ ಬೆಂಕಿಗಾಹುತಿ - ಈಟಿವಿ ಭಾರತ್​ ಕನ್ನಡ

🎬 Watch Now: Feature Video

thumbnail

By

Published : Jul 27, 2022, 4:11 PM IST

ಮಂಗಳೂರು: ನಗರದ ಜೆಪ್ಪು ಕುಡ್ಪಾಡಿ ಎಂಬಲ್ಲಿ ರೈಲ್ವೆ ಅಂಡರ್ ಪಾಸ್​​ನಲ್ಲಿ ಪಾರ್ಕಿಂಗ್ ಮಾಡಿದ್ದ ಎರಡು ವಾಹನಗಳು ಬೆಂಕಿಗಾಹುತಿಯಾಗಿವೆ. ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದೆ. ರಾಜೇಶ್ ಎಂಬವರಿಗೆ ಸೇರಿದ ಒಂದು ಇನ್ನೋವಾ ಕಾರು ಹಾಗೂ ಮಹೇಂದ್ರ ಜೀಪ್​ಗೆ ಬೆಂಕಿ ತಗುಲಿದೆ. ಬೆಂಕಿ ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ. ಎರಡು ವಾಹನಗಳನ್ನು ಒಟ್ಟಿಗೆ ಪಾರ್ಕ್ ಮಾಡಲಾಗಿತ್ತು. ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.