ಮಂಡ್ಯದ ಹಲಗೂರು ಪಟ್ಟಣದಲ್ಲಿ ಕರಡಿ ಪ್ರತ್ಯಕ್ಷ: ಸ್ವಲ್ಪದರಲ್ಲೇ ದಾಳಿಯಿಂದ ಬಚಾವಾದ ವ್ಯಕ್ತಿ! - Bear in the town of Balur
🎬 Watch Now: Feature Video
ಮಂಡ್ಯ: ಕರಡಿಯೊಂದು ವ್ಯಕ್ತಿಯ ಮೇಲೆ ದಾಳಿಗೆ ಯತ್ನಿಸಿದ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರಿನಲ್ಲಿ ನಡೆದಿದೆ. ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ತಡವಾಗಿ ಬೆಳಕಿಗೆ ಬಂದಿದೆ. ಕಳೆದ ತಿಂಗಳು 24ರಂದು ರೇಷ್ಮೆ ವ್ಯಾಪಾರಿ ಅಲ್ತಾಫ್ ಪಾಷ ಎಂಬುವರು ಹಲಗೂರಿನ ಸರ್ಕಲ್ ಬಳಿ ನಿಂತಿದ್ದರು. ಈ ಸಂದರ್ಭ ಎರಡು ಕರಡಿಗಳು ದಾಳಿಗೆ ಯತ್ನಿಸಿ ಪರಾರಿಯಾಗಿದ್ದವು. ಈ ಕುರಿತು ಅಲ್ತಾಫ್ ಸ್ಥಳೀಯರಿಗೆ ತಿಳಿಸಿದರೂ ನಂಬದ ಜನರು ಪಟ್ಟಣದಲ್ಲಿ ಕರಡಿ ಬರುವುದೇ ಎಂದು ಲೇವಡಿ ಮಾಡಿದ್ದರು. ಇದೀಗ ತಡವಾಗಿ ಬೆಳಕಿಗೆ ಬಂದ ಸಿಸಿಟಿವಿ ವಿಡಿಯೋ ಪಟ್ಟಣ ವಾಸಿಗಳನ್ನು ಬೆಚ್ಚಿ ಬೀಳಿಸಿದೆ.