ಮಹಿಳೆಯರ ಅಸಭ್ಯ ಉಡುಗೆಯೇ ಅತ್ಯಾಚಾರ ಹೆಚ್ಚಳಕ್ಕೆ ಕಾರಣ: ಬಸವ ಪ್ರಕಾಶ ಸ್ವಾಮೀಜಿ - ಬಸವ ಪ್ರಕಾಶ ಸ್ವಾಮೀಜಿ
🎬 Watch Now: Feature Video
ಧಾರವಾಡ: ಮಹಿಳೆಯರ ಉಡುಗೆ-ತೊಡುಗೆ ಅಸಭ್ಯವಾಗಿ ಇರುವ ಕಾರಣಕ್ಕೆ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಭಾರತೀಯ ಸಂಸ್ಕೃತಿ ಬಿಂಬಿಸುವ ರೀತಿಯಲ್ಲಿ ಹೆಣ್ಣುಮಕ್ಕಳು ವಸ್ತ್ರ ಧರಿಸಬೇಕು ಎಂದು ಅಕ್ಕಮಹಾದೇವಿ ಅನುಭವ ಪೀಠ ಹಾಗೂ ಬಸವ ಧರ್ಮಪೀಠದ ಬಸವ ಪ್ರಕಾಶ ಸ್ವಾಮೀಜಿ ವಿವಾದಿತ ಹೇಳಿಕೆ ನೀಡಿದರು.ಇದೇ ವೇಳೆ ಮಾತನಾಡಿದ ಅವರು, ರಾಯಚೂರು ಹಾಗೂ ಕೋಲಾರದಲ್ಲಿ ನಡೆದ ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗು ದುಷ್ಕರ್ಮಿಗಳಿಗೆ ಘೋರ ಶಿಕ್ಷೆ ವಿಧಿಸಬೇಕು. ಯುವತಿಯರ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ಅವರು ಇದೇ ವೇಳೆ ಸರ್ಕಾರವನ್ನು ಆಗ್ರಹಿಸಿದರು. ಇನ್ನೂ ಮುಂದುವರಿದು ಮಾತನಾಡಿದ ಸ್ವಾಮೀಜಿ, ರಾತ್ರಿ ವೇಳೆ ಮಹಿಳೆಯರು ಒಂಟಿಯಾಗಿ ಓಡಾಡುವುದು ಅಪಾಯ ಅದು ನಮ್ಮ ಸಂಸ್ಕೃತಿಗೂ ಅವಮಾನ ಎಂದರು. ರಾಯಚೂರು ಹಾಗೂ ಕೋಲಾರ ಅಪ್ರಾಪ್ತ ಯುವತಿಯರ ಮೇಲೆ ಅತ್ಯಾಚಾರ ನಡೆಸಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ, ಬರುವ ದಿನದಲ್ಲಿ ಬೆಳಗಾವಿ ಸುವರ್ಣ ಸೌಧದೆದುರು ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.