ಸರ್ಕಾರಿ ಹುದ್ದೆಗಳ ಹರಾಜು ಅಣಕು ಪ್ರದರ್ಶನ: ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ - ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
🎬 Watch Now: Feature Video
ಮೈಸೂರು: ಸರ್ಕಾರಿ ಹುದ್ದೆಗಳ ಹರಾಜು ಅಣಕು ಪ್ರದರ್ಶನದ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಮೈಸೂರು ಜಿಲ್ಲಾ ಕಾಂಗ್ರೆಸ್ ಆವರಣದಲ್ಲಿ ಮೈಸೂರು ನಗರ ಮತ್ತು ಗ್ರಾಮಾಂತರ ಕಾಂಗ್ರೆಸ್ ಘಟಕ ಪ್ರತಿಭಟಿಸಿತು. ಸರ್ಕಾರದ 13 ಇಲಾಖೆಗಳ ಹುದ್ದೆಗಳ ಹರಾಜು ಪ್ರಕ್ರಿಯೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಸಚಿವರಾದ ಆರಗ ಜ್ಞಾನೇಂದ್ರ, ಎಸ್.ಟಿ.ಸೋಮಶೇಖರ್, ಬಿ.ಸಿ. ಪಾಟೀಲ್, ಡಾ.ಅಶ್ವತ್ಥ ನಾರಾಯಣ್, ಡಾ.ಕೆ. ಸುಧಾಕರ್ ಮುಖವಾಡ ಹಾಕಿ ಯುವಕರು ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು. ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ಸರ್ಕಾರಿ ಹುದ್ದೆಗಳನ್ನು ಹರಾಜು ಹಾಕಿ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಬಿಡ್ ಮಾಡಿದರು. ಅಣಕು ಪ್ರದರ್ಶನದಲ್ಲಿ ಕೋಟಿ-ಕೋಟಿ ಹಣಕ್ಕೆ ಸರ್ಕಾರಿ ಹುದ್ದೆಗಳು ಬಿಕರಿಯಾದವು.