ಮೊಲ, ಉಡ ಭೇಟೆಯಾಡಿ ಟಿಕ್​ಟಾಕ್​ ಮಾಡಿದ್ದವನ ಕೈಗೆ ಕೋಳ! - ಆರೋಪಿಯನ್ನು ಬಂಧಿಸಿದ ಅರಣ್ಯ ಸಂಚಾರಿ ದಳ ಅಧಿಕಾರಿಗಳು

🎬 Watch Now: Feature Video

thumbnail

By

Published : Jun 13, 2020, 6:42 PM IST

ಕಲಬುರ್ಗಿ : ಮೊಲ ಮತ್ತು ಉಡ ಕೊಂದು ಅದರೊಟ್ಟಿಗೆ ಟಿಕ್‌ಟಾಕ್ ಮಾಡಿದ್ದ ಆರೋಪಿಯನ್ನು ಅರಣ್ಯ ಸಂಚಾರಿ ದಳ ಅಧಿಕಾರಿಗಳು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಶರಣ ಸಿರಸಗಿ ತಾಂಡಾ ನಿವಾಸಿ ಶಿವಾನಂದ ಹಂಗರಗಿ ಬಂಧಿತ. ತನ್ನ ಐವರು ಸ್ನೇಹಿತರೊಂದಿಗೆ ಸೇರಿ ಮೊಲ ಹಾಗೂ ಉಡ ಭೇಟೆಯಾಡಿ ಅದರೊಟ್ಟಿಗೆ ಟಿಕ್​​​ಟಾಕ್ ಮಾಡಿದ್ದ. ಅದನ್ನು ಗಮನಿಸಿದ ಅರಣ್ಯ ಅಧಿಕಾರಿಗಳು, ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಅನ್ವಯ ಪ್ರಕರಣ ದಾಖಲಿಸಿ ಈತನನ್ನು ಬಂಧಿಸಿದ್ದಾರೆ. ಉಳಿದವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅರಣ್ಯ ಸಂಚಾರಿ ದಳದ ಅಧಿಕಾರಿ ಜಯವರ್ಧನ್ ತಳವಾರ್ ತಿಳಿಸಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.