ಬೆಂಗಳೂರಿಗೆ ಆಗಮಿಸಿದ ದೆಹಲಿ ಸಿಎಂ ಕೇಜ್ರಿವಾಲ್: ಕಾರ್ಯಕರ್ತರ ಪ್ರತಿಕ್ರಿಯೆ ಹೀಗಿದೆ.. - Aravinda Kejriwal Visits to Bengaluru
🎬 Watch Now: Feature Video
ರಾಜ್ಯದಲ್ಲಿ ರೈತ ಸಂಘಟನೆಗಳ ಬೆಂಬಲದೊಂದಿಗೆ ರಾಜಕೀಯವಾಗಿ ನೆಲೆಯೂರಲು ಆಮ್ ಆದ್ಮಿ ಪಕ್ಷ ತಂತ್ರ ರೂಪಿಸಿದೆ. ಅದಕ್ಕೆ ಪೂರಕವಾಗಿ ರೈತರು, ಜನಸಾಮಾನ್ಯರ ಸಮಾವೇಶ ನಡೆಸಿದೆ. ಪಂಜಾಬ್ನಲ್ಲಿ ರೈತರ ಬೆಂಬಲದಿಂದ ಅಧಿಕಾರದ ಗದ್ದುಗೆ ಏರಿದ ಆಪ್ ಕರ್ನಾಟಕದಲ್ಲಿ ಕಮಾಲ್ ಮಾಡಲು ಮುಂದಾಗಿದ್ದು, ಇದಕ್ಕೆ ಆಪ್ ಕಾರ್ಯಕರ್ತರು ಹರ್ಷಗೊಂಡಿದ್ದಾರೆ. ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಸಮಾವೇಶಕ್ಕೆ ರೈತರು ಮತ್ತು ಆಪ್ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು.