ಕುಡಿದ ಮತ್ತಲ್ಲಿ ಐಪಿಎಸ್ ಅಧಿಕಾರಿಗೇ ನಿಂದಿಸಿದ ವ್ಯಕ್ತಿ: ವಿಡಿಯೋ ನೋಡಿ - ಪೊಲೀಸರ ಜೊತೆ ಕಿತ್ತಾಡಿದ ಪಂಜಾಬ್ ವ್ಯಕ್ತಿ
🎬 Watch Now: Feature Video
ಕುಡಿದು ವಾಹನ ಚಲಾಯಿಸುತ್ತಿದ್ದನ್ನು ತಡೆದಿದ್ದಕ್ಕೆ ವ್ಯಕ್ತಿಯೊಬ್ಬ ಐಪಿಎಸ್ ಅಧಿಕಾರಿ ಸೇರಿ ಪೊಲೀಸರನ್ನು ನಿಂದಿಸಿ ಹಲ್ಲೆ ಮಾಡಲು ಯತ್ನಿಸಿದ ಘಟನೆ ಪಂಜಾಬ್ನಲ್ಲಿ ನಡೆದಿದೆ. ದಸರಾ ಹಬ್ಬದ ಪ್ರಯುಕ್ತ ವಾಹನ ತಪಾಸಣೆ ಮಾಡುತ್ತಿದ್ದಾಗ ಆರೋಪಿ ಕುಡಿದು ವಾಹನ ಚಲಾಯಿಸುತ್ತಿದ್ದುದು ಕಂಡುಬಂದಿದೆ. ತಡೆದು ನಿಲ್ಲಿಸಿದಾಗ ಕೋಪಗೊಂಡ ಆತ ಪೊಲೀಸರೊಂದಿಗೆ ವಾಗ್ವಾದ ನಡೆಸಿ ರಂಪಾಟ ಮಾಡಿದ್ದಾನೆ. ಅಲ್ಲಿದ್ದ ಐಪಿಎಸ್ ಅಧಿಕಾರಿಗೆ ಕೆಟ್ಟ ಪದಗಳಿಂದ ನಿಂದಿಸಿದ್ದಾನೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಈ ಕಿರಿಕ್ ಪಾರ್ಟಿಯನ್ನು ಬಂಧಿಸಲಾಗಿದೆ. ಈತ ಹಲವಾರು ರಾಜಕಾರಣಿಗಳ ಜೊತೆ ನಂಟು ಹೊಂದಿದ್ದಾನೆ ಎಂದು ತಿಳಿದುಬಂದಿದೆ.