ಕ್ಲರ್ಕ್ ಮನೆಯಲ್ಲಿ 80 ಲಕ್ಷ ರೂ ನಗದು, ಅಪಾರ ಚಿನ್ನಾಭರಣ ಪತ್ತೆ: ವಿಡಿಯೋ - ಮಧ್ಯಪ್ರದೇಶದ ಭೋಪಾಲ್ನಲ್ಲಿ ಆರ್ಥಿಕ ಅಪರಾಧ ದಳದ ದಾಳಿ
🎬 Watch Now: Feature Video
ಭೋಪಾಲ್ (ಮಧ್ಯಪ್ರದೇಶ): ಮಧ್ಯಪ್ರದೇಶದ ವೈದ್ಯಕೀಯ ಶಿಕ್ಷಣ ಇಲಾಖೆಯ ಹಿರಿಯ ಕ್ಲರ್ಕ್ ಆಗಿರುವ ಹೀರೋ ಕೇಸ್ವಾನಿ ಮನೆಯಲ್ಲಿ 80 ಲಕ್ಷ ರೂ. ನಗದು ಮತ್ತು ಅಪಾರ ಪ್ರಮಾಣದ ಬೆಳ್ಳಿ ಮತ್ತು ಚಿನ್ನಾಭರಣಗಳು ಪತ್ತೆಯಾಗಿವೆ. ಆರ್ಥಿಕ ಅಪರಾಧ ದಳದ ಅಧಿಕಾರಿಗಳು ದಾಳಿ ನಡೆಸಿ ಇಷ್ಟೊಂದು ಮೊತ್ತದ ಹಣ, ಆಭರಣಗಳನ್ನು ಪತ್ತೆ ಹಚ್ಚಿದ್ದಾರೆ. ಈ ದಾಳಿಯ ಬಳಿಕ ಆರೋಪಿಯ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.