ಹೈದರಾಬಾದ್‌ನಲ್ಲಿ 12.7 ಸೆಂ.ಮೀ ಮಳೆ: ರಸ್ತೆಗಳೆಲ್ಲಾ ಜಲಾವೃತ

🎬 Watch Now: Feature Video

thumbnail

By

Published : Sep 27, 2022, 6:35 PM IST

ಹೈದರಾಬಾದ್: ತೆಲಂಗಾಣದಲ್ಲಿ ಸೋಮವಾರ ಭಾರಿ ಮಳೆಯಾಗಿದೆ. ಮಳೆಗೆ ಜನ ಜೀವನ ಅಸ್ತವ್ಯಸ್ಥವಾಗಿದ್ದು, ವಾಹನ ಸಂಚಾರದಲ್ಲಿ ವ್ಯತ್ಯಯವಾಗಿದೆ. ಸಂಜೆ 5 ಗಂಟೆಗೆ ಆರಂಭವಾದ ಮಳೆ ರಾತ್ರಿ 8 ಗಂಟೆವರೆಗೆ ಸುರಿದಿದೆ. ನಗರದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಈ ಬಾರಿಯ ಸೆಪ್ಟೆಂಬರ್‌ನಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಮಧ್ಯರಾತ್ರಿಯವರೆಗೆ ಮೆಹದಿಪಟ್ಟಣದಲ್ಲಿ ಗರಿಷ್ಠ 11.25 ಸೆಂ.ಮೀ ಮಳೆಯಾಗಿದೆ. ಹವಾಮಾನ ಇಲಾಖೆ ದಾಖಲೆಗಳ ಪ್ರಕಾರ ಸೆಪ್ಟೆಂಬರ್ 6, 2017 ರಂದು 24 ಗಂಟೆಗಳಲ್ಲಿ ಹಿಂದಿನ 9 ಸೆಂ.ಮೀ ಮಳೆಯಾಗಿತ್ತು. ಹೈದರಾಬಾದ್‌ನ ಸುಮಾರು 250 ಕಾಲೋನಿಗಳ ಮನೆಗಳಿಗೆ ನೀರು ನುಗ್ಗಿದೆ. ನಗರದಲ್ಲಿ 5.2 ಲಕ್ಷ ಬೀದಿ ದೀಪಗಳ ಪೈಕಿ 1.5 ಲಕ್ಷ ದೀಪಗಳ ಪೂರೈಕೆ ಸ್ಥಗಿತಗೊಂಡಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.