ಕರಾವಳಿಯಾದ್ಯಂತ ಮಹಿಷಾಸುರನ ಹವಾ: ವಿಡಿಯೋ - ಯಕ್ಷಗಾನದ ತುಣುಕೊಂದು ಕರಾವಳಿಯಾದ್ಯಂತ ವೈರಲ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10766559-thumbnail-3x2-net.jpg)
ಉಡುಪಿ: ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಕರಾವಳಿ ಜಿಲ್ಲೆಯಲ್ಲಿ ಸಿನಿಮಾ ಕ್ರೇಜ್ ಕಡಿಮೆ. ಆದ್ರೆ ಯಕ್ಷಗಾನ ಅಂದ ಕೂಡಲೇ ಇಲ್ಲಿನ ಜನರು ನಿದ್ದೆ ಬಿಟ್ಟು ಕೂರ್ತಾರೆ. ಅದಕ್ಕೆ ಪೂರಕವಾಗಿ ಯಕ್ಷಗಾನ ಕಲಾವಿದರು ಕೂಡ ಯಕ್ಷ ರಸಿಕರನ್ನು ಮೆಚ್ಚಿಸುವ ಯತ್ನ ಮಾಡುತ್ತಾರೆ. ಸದ್ಯ ಪ್ರೇಕ್ಷಕರ ಮನಸೂರೆಗೊಂಡ ಯಕ್ಷಗಾನದ ತುಣುಕೊಂದು ಕರಾವಳಿಯಾದ್ಯಂತ ವೈರಲ್ ಆಗುತ್ತಿದೆ. ಹೆಸರಾಂತ ಪೆರ್ಡೂರು ಯಕ್ಷಗಾನ ಮೇಳದ ದೇವಿ ಮಹಾತ್ಮೆ ಪ್ರಸಂಗದ ಮಹಿಷಾಸುರ ವಧೆ ಸಂದರ್ಭದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಯಕ್ಷಗಾನ ಕಲಾವಿದ ನಂದೀಶ್ ಜನ್ನಾಡಿ ಮಹಿಷಾಸುರನ ವೇಷದಲ್ಲಿ ಸಾಂಪ್ರದಾಯಿಕ ಶೈಲಿಗಿಂತ ಕೊಂಚ ಭಿನ್ನವಾಗಿ ಕಾಣಿಸಿಕೊಂಡಿರುವುದು ಯಕ್ಷಗಾನ ರಸಿಕರ ಕ್ರೇಜ್ಗೆ ಕಾರಣವಾಗಿದೆ. ಯಕ್ಷಗಾನದಲ್ಲಿ ಸಾಮಾನ್ಯವಾಗಿ ಸಿನಿಮಾದ ವಿಲನ್ನಂತೆ ಬೆಂಕಿಯುಂಡೆಗಳ ಮಧ್ಯೆಯಿಂದ ಮಹಿಷಾಸುರನ ಪ್ರವೇಶವಾಗುತ್ತದೆ. ಆದರೆ ಇಲ್ಲಿ ಕೊಂಬಿನ ಕಿರೀಟ ಧರಿಸಿದ ಮಹಿಷಾಸುರ ತನ್ನ ಶಕ್ತಿ ಸಾಮರ್ಥ್ಯ ಪ್ರದರ್ಶಿಸುವ ಸಲುವಾಗಿ ರಂಗಸ್ಥಳ ಕಂಬಕ್ಕೆ ಡಿಕ್ಕಿ ಹೊಡೆದು ನರ್ತಿಸಿರುವುದು ಜನರ ಮೆಚ್ಚುಗೆ ಪಡೆದಿದೆ.