ಅಡಚಣೆ ಮಾಡಿದ ಪ್ರೇಕ್ಷಕನಿಗೆ ರಂಗದಲ್ಲೇ ಗದರಿದ ಯಕ್ಷಗಾನ ಕಲಾವಿದ: ವಿಡಿಯೋ ವೈರಲ್ - artist who scolds the disturbed audience
🎬 Watch Now: Feature Video
ಉಡುಪಿ: ಯಕ್ಷಗಾನ ಕಲಾವಿದ ರಂಗಸ್ಥಳಲ್ಲಿ ಸಂಭಾಷಣೆ ನಡೆಸುತ್ತಿದ್ದ ವೇಳೆ, ಮಕ್ಕಳ ಕುಚೇಷ್ಟೆಯಿಂದ ತಾಳ್ಮೆ ಕಳೆದುಕೊಂಡು ರಂಗದಲ್ಲೇ ಪ್ರೇಕ್ಷಕನನ್ನು ಗದರಿದ ವಿಡಿಯೋ ತುಣುಕು ಭಾರಿ ವೈರಲ್ ಆಗುತ್ತಿದೆ. ಬಡಗುತಿಟ್ಟುವಿನ ಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಹಾಲಾಡಿ ಮೇಳದ ಯಕ್ಷಗಾನ ನಡೆಯುತ್ತಿತ್ತು. ಈ ವೇಳೆ ಎದುರಿನಲ್ಲಿ ಕುಳಿತ್ತಿದ್ದವರು ಮೊಬೈಲ್ ನೋಡಿಕೊಂಡು ಜೋರಾಗಿ ಮಾತಾಡುತ್ತಿದ್ದರು. ಇದರಿಂದ ಪಾತ್ರ ನಿರ್ವಹಿಸುತ್ತಿದ್ದ ಖ್ಯಾತ ಕಲಾವಿದ ವಿಜಯ ಗಾಣಿಗ ಬೀಜಮಕ್ಕಿ, ಮೊಬೈಲ್ ನೋಡುದಾದ್ರೆ ಹಿಂದೆ ಕುತ್ಕೋ, ಆಗೊಮ್ಮೆ ಹೇಳಿದೇವೆ.. ನೀವು ಮಾತಾಡಿದ್ರೆ ನಮಗೆ ಕಷ್ಟ ಆಗುತ್ತೆ ಅಂತ ಗದರಿದ್ದಾರೆ.