ವಿಶ್ವ ಕ್ಯಾನ್ಸರ್ ದಿನಾಚರಣೆ: ಹುಬ್ಬಳ್ಳಿಯಲ್ಲಿ ಜಾಗೃತಿ ಜಾಥಾ - World Cancer Day
🎬 Watch Now: Feature Video
ಹುಬ್ಬಳ್ಳಿ: ವಿಶ್ವ ಕ್ಯಾನ್ಸರ್ ದಿನಾಚರಣೆ ಹಿನ್ನೆಲೆ ನಗರದಲ್ಲಿ ಇಂದು ಕ್ಯಾನ್ಸರ್ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ನವನಗರದ ಕರ್ನಾಟಕ ಕ್ಯಾನ್ಸರ್ ಥೆರಪಿ ಹಾಗೂ ಸಂಶೋಧನಾ ಸಂಸ್ಥೆಯ ಪದ್ಮಶ್ರೀ ಡಾ. ಆರ್.ಬಿ. ಪಾಟೀಲ ಕ್ಯಾನ್ಸರ್ ಆಸ್ಪತ್ರೆ ಹಾಗೂ ರೋಟರಿ ಕ್ಲಬ್ ಸಹಯೋಗದಲ್ಲಿ ಜಾಥಾ ನಡೆಸಲಾಯಿತು. ಜಾಥಾಕ್ಕೆ ಸಂಸ್ಥೆಯ ಚೇರ್ಮನ್ ಡಾ. ಬಿ.ಆರ್. ಪಾಟೀಲ್ ಚಾಲನೆ ನೀಡಿದರು. ನಗರದ ಲ್ಯಾಮಿಂಗ್ಟನ್ ಸ್ಕೂಲ್ ಆವರಣದಿಂದ ಆರಂಭವಾದ ಜಾಥಾ ಕಿತ್ತೂರು ಚನ್ನಮ್ಮ ವೃತ್ತಕ್ಕೆ ಬಂದು ಅಂತ್ಯವಾಯಿತು. ಜಾಥಾದಲ್ಲಿ ಕ್ಯಾನ್ಸರ್ ಮುಂಜಾಗ್ರತೆ ಕ್ರಮಗಳ ಬಗ್ಗೆ ಪರಿಣಿತರು ಮತ್ತು ತಜ್ಞ ವೈದ್ಯರು ಕಿರು ನಾಟಕ ಪ್ರದರ್ಶನ ಮಾಡಿದರು.