ರಾಮನಗರದಲ್ಲಿ ಕೆಇಬಿ ನಿರ್ಲಕ್ಷ್ಯಕ್ಕೆ ಕೂಲಿ ಕಾರ್ಮಿಕ ಬಲಿ! - Worker died for KEB neglect,
🎬 Watch Now: Feature Video

ವಿದ್ಯುತ್ ಲೈನ್ ಚೇಂಜಿಂಗ್ ನಡೆಸುವ ವೇಳೆ ವಿದ್ಯುತ್ ಹರಿದು ಕೂಲಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಗೊರೂರು ಗೇಟ್ ಬಳಿ ಘಟನೆ ನಡೆದಿದೆ. ಚಿತ್ರದುರ್ಗ ಮೂಲದ ಹನುಮಂತ (25) ಮೃತ ಕೂಲಿ ಕಾರ್ಮಿಕ. ಲೈನ್ ಚೇಂಜಿಂಗ್ ಕೆಲಸ ಮಾಡುತ್ತಿದ್ದಾಗ ಮಾಹಿತಿ ನೀಡದೆ ಸಿಬ್ಬಂದಿ ವಿದ್ಯುತ್ ಹರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ವಿದ್ಯುತ್ ಕಂಬದ ಮೇಲೆ ಕೆಲಸ ಮಾಡುತ್ತಿದ್ದ ಹನುಮಂತನಿಗೆ ಕರೆಂಟ್ ಶಾಕ್ ಹೊಡೆದು ಕಂಬದ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾನೆ. ಮೃತ ವ್ಯಕ್ತಿ ಕುದೂರು ಮೂಲದ ಗುತ್ತಿಗೆದಾರ ರಾಜಣ್ಣ ಬಳಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಕುದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.