ವೇತನ ನೀಡದ್ದಕ್ಕೆ ಆಕ್ರೋಶ.. ವಿಸ್ಟ್ರನ್ ಕಂಪನಿ ಜಖಂಗೊಳಿಸಿದ ಕಾರ್ಮಿಕರು- ವಿಡಿಯೋ - ವಿಸ್ಟ್ರನ್ ಕಂಪೆನಿ ಲೇಟೆಸ್ಟ್ ನ್ಯೂಸ್
🎬 Watch Now: Feature Video
ವೇತನ ನೀಡದ ಕಾರಣ ಆಕ್ರೋಶಗೊಂಡ ಕೋಲಾರ ನಗರದ ಕೈಗಾರಿಕಾ ಪ್ರದೇಶದಲ್ಲಿರುವ ವಿಸ್ಟ್ರನ್ ಐ-ಫೋನ್ ಮೊಬೈಲ್ ತಯಾರಿಕಾ ಕಂಪನಿಯ ಕಾರ್ಮಿಕರು, ಕಂಪನಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಅಷ್ಟೇ ಅಲ್ಲ, ಕಂಪನಿಯಲ್ಲಿದ್ದ ಬೆಲೆಬಾಳುವ ಐಫೋನ್, ಲ್ಯಾಪ್ಟಾಪ್ ಸೇರಿ ಸಾಕಷ್ಟು ಉಪಕರಣಗಳನ್ನು ಚೂರು ಚೂರು ಮಾಡಿದ್ದಾರೆ. ಕೆಲ ವಸ್ತುಗಳನ್ನು ಹೊತ್ಕೊಂಯ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ. ತೈವಾನ್ ಮೂಲದ ವಿಸ್ಟ್ರನ್ ಕಂಪನಿಯಲ್ಲಿ ಸುಮಾರು 11 ಸಾವಿರ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಕಳೆದ ಮೂರು ತಿಂಗಳಿನಿಂದ ವೇತನ ನೀಡಿಲ್ಲ ಎಂದು ಕಂಪನಿಗೆ ನುಗ್ಗಿ ಸಿಕ್ಕ ಸಿಕ್ಕ ವಸ್ತುಗಳಿಗಳನ್ನೆಲ್ಲಾ ಜಖಂಗೊಳಿಸಿ ಆಕ್ರೋಶ ಹೊರಹಾಕಿದ್ದಾರೆ. ಕಚೇರಿಗೆ ನುಗ್ಗಿ ಧ್ವಂಸ ಮಾಡಿದ್ದಾರೆ. ಜೊತೆಗೆ ಕಂಪನಿಯ 2 ಕಾರು ಸೇರಿ ಹೊರಗೆ ಪಾರ್ಕ್ ಮಾಡಿದ್ದ 4 ಕಾರುಗಳಿಗೆ ಹಾನಿ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಕೇಂದ್ರವಲಯ ಐಜಿ ಸೀಮಂತ್ ಕುಮಾರ್ ಸಿಂಗ್ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
Last Updated : Dec 12, 2020, 2:12 PM IST