ಬನ್ನೇರುಘಟ್ಟ ಪಾರ್ಕ್ ಬಳಿ ಒಂಟಿ ಸಲಗ.. ಎಚ್ಚರಿಕೆಯಿಂದಿರಲು ಸ್ಥಳೀಯರಿಗೆ ಸಲಹೆ - ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7904453-thumbnail-3x2-dd.jpg)
ಆನೇಕಲ್ : ರಾಜಧಾನಿ ಅಂಚಿನ ಜೀವ ವೈವಿದ್ಯ ಆಕರ್ಷಣೆಯ ತಾಣ ಬನ್ನೇರುಘಟ್ಟ ಉದ್ಯಾನದ ಬಳಿ ಕಾಡಾನೆ ಪ್ರತ್ಯಕ್ಷವಾಗಿದೆ. ಸಾಮಾನ್ಯವಾಗಿ ನಾಡಾನೆಗಳು ಪ್ರತಿ ಸಂಜೆ ಕಾಡಿಗೆ ಹೊರಟು ಕಾಡಾನೆಗಳೊಂದಿಗೆ ಕೂಡಿ ಮರುದಿನ ಬೆಳಗ್ಗೆ ಮರಳಿ ಉದ್ಯಾನವನಕ್ಕೆ ಬರುವುದು ವಾಡಿಕೆ. ಸದ್ಯ ಯಾವುದೋ ಗುಂಗಿನಲ್ಲಿದ್ದ ಸಲಗ ಬೈರಪ್ಪನಹಳ್ಳಿ ಕಡೆಯಿಂದ ಉದ್ಯಾನದ ಪರಿಧಿಗೆ ಬಂದಿದ್ದು, ವಾರದಿಂದ ಉದ್ಯಾನವನದಲ್ಲೇ ಸುತ್ತುತ್ತಿದೆ. ಒಂಟಿ ಸಲಗವನ್ನು ಮರಳಿ ಕಾಡಿಗಟ್ಟುವ ಪ್ರಯತ್ನ ನಡೆದಿದ್ದು, ಸುತ್ತಮುತ್ತಲ ಗ್ರಾಮದ ಜನರಿಗೆ ಒಂಟಿಯಾಗಿ ಓಡಾಡದಂತೆ ಅರಣ್ಯ ಸಿಬ್ಬಂದಿ ಸೂಚನೆ ನೀಡಿದ್ದಾರೆ.