ಮತಾಂತರ ನಿಷೇಧ ಕಾನೂನು ತಂದೇ ತರುತ್ತೇವೆ: ಸಚಿವ ಕೆ. ಸುಧಾಕರ್ - conversions issue latest news
🎬 Watch Now: Feature Video
ಚಿಕ್ಕಮಗಳೂರು : ಲವ್ ಜಿಹಾದ್ಗೆ ಸಂಬಂಧಿಸಿದಂತೆ ಮತಾಂತರ ನಿಷೇಧ ಕಾನೂನು ಜಾರಿಗೆ ತರಬೇಕು. ಕಾನೂನನ್ನು ತಂದೇ ತರುತ್ತೇವೆ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಸ್ಪಷ್ಟಪಡಿಸಿದ್ದಾರೆ. ಮಾಜಿ ಸಚಿವ ಯು ಟಿ ಖಾದರ್ ಅವರಿಂದ ಹೇಳಿಸಿಕೊಂಡು ಈ ಕಾನೂನು ಜಾರಿಗೆ ತರುವ ಅವಶ್ಯಕತೆ ಇಲ್ಲ. ಕಾನೂನು ಜಾರಿಗೊಳಿಸುವ ಬಗ್ಗೆ ಈಗಾಗಲೇ ಎಲ್ಲಾ ಹಂತದಲ್ಲಿ ಚರ್ಚೆಯಾಗಿದೆ. ಮುಂದಿನ ಅಧಿವೇಶನದಲ್ಲೇ ಜಾರಿಗೊಳಿಸುತ್ತೇವೆ ಎಂದರು.