ಕಂಗೊಳಿಸುತ್ತಿವೆ ಸರ್ಕಾರಿ ಕಟ್ಟಡಗಳ ಕಾಂಪೌಂಡ್ಗಳು: ಸುಂದರ ಚಿತ್ರಗಳ ಕಂಡು ಜನರು ಫುಲ್ ಫಿದಾ - ಶಿವಮೊಗ್ಗ
🎬 Watch Now: Feature Video
ಶಿವಮೊಗ್ಗವೇನೋ ಸ್ಮಾರ್ಟ್ ಸಿಟಿಯಾಗ್ತಿದೆ. ಇದಕ್ಕೆ ತಕ್ಕಂತೆ ಶಿವಮೊಗ್ಗದ ಜನರು ಕೂಡ ಸ್ಮಾರ್ಟ್ ಆಗಬೇಕಿದೆ. ಸ್ವಚ್ಛತೆ ಕಡೆಗೆ ಗಮನ ನೀಡಬೇಕಿದೆ. ಇದರ ಜೊತೆಗೆ ನಗರವೂ ಕೂಡ ಸುಂದರವಾಗಿ ಕಾಣಬೇಕಿದೆ. ಹೀಗಾಗಿಯೇ ಶಿವಮೊಗ್ಗ ಮಹಾನಗರ ಪಾಲಿಕೆ ಪ್ಲ್ಯಾನ್ ಮಾಡಿದೆ. ನಗರದ ಸರ್ಕಾರಿ ಕಟ್ಟಡಗಳ ಕಾಂಪೌಂಡ್ಗಳ ಮೇಲೆ ಕಲಾ ವೈಭವ ಅರಳಿಸುವ ಮೂಲಕ ಜನರನ್ನು ಆಕರ್ಷಿಸುವ ಕೆಲಸ ಮಾಡಿದೆ.