ಬೆಳಗಾವಿ: ಇಲ್ಲಿನ ಉದ್ಯಮಿಗಳಾದ ವಿನೋದ್ ದೊಡ್ಡಣ್ಣವರ, ಪುಷ್ಪದಂತ ದೊಡ್ಡಣ್ಣವರ, ಅಜಿತ್ ಪಟೇಲ್ ಎಂಬವರ ಮನೆಗಳು ಮತ್ತು ಕಚೇರಿಗಳ ಮೇಲೆ ಇಂದು ಬೆಳಗ್ಗೆ ದಾಳಿ ಮಾಡಿರುವ ಆದಾಯ ತೆರಿಗೆ ಇಲಾಖೆ(ಐಟಿ) ಅಧಿಕಾರಿಗಳು, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಸಕ್ಕರೆ ಕಾರ್ಖಾನೆ, ಕಬ್ಬಿಣ ಹಾಗೂ ಗ್ರಾನೈಟ್ ಉದ್ಯಮಿಯಾಗಿರುವ ದೊಡ್ಡಣ್ಣವರ ಕುಟುಂಬದ ವಿನೋದ್ ದೊಡ್ಡಣ್ಣವರ, ಪುಷ್ಪದಂತ ದೊಡ್ಡಣ್ಣವರ ಅವರು ದೇಶ-ವಿದೇಶಗಳಿಗೆ ಕಬ್ಬಿಣ ಹಾಗೂ ಗ್ರಾನೈಟ್ ರಫ್ತು ಮಾಡುತ್ತಾರೆ. ಅಲ್ಲದೇ, ಕಾಗವಾಡ ತಾಲೂಕಿನಲ್ಲಿ ಎರಡು ಸಕ್ಕರೆ ಕಾರ್ಖಾನೆಗಳನ್ನು ಇವರ ಕುಟುಂಬ ಹೊಂದಿದೆ.
ಅದೇ ರೀತಿ, ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿರುವ ಉದ್ಯಮಿ ಅಜಿತ್ ಪಟೇಲ್ ಮನೆಯಲ್ಲೂ ಅಧಿಕಾರಿಗಳು ದಾಖಲೆ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಬೆಂಗಳೂರಿನ ಐಟಿ ಅಧಿಕಾರಿಗಳು ಈ ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: ಠಾಣೆಯಿಂದ ಬೈಕ್ ಬಿಡುಗಡೆಗೆ ಲಂಚ ಸ್ವೀಕಾರ: ಪೊಲೀಸ್ ಇನ್ಸ್ಪೆಕ್ಟರ್, ಸಿಬ್ಬಂದಿ ಲೋಕಾಯುಕ್ತ ಬಲೆಗೆ
ಇದನ್ನೂ ಓದಿ: ಗೇಮ್ ಚೇಂಜರ್ ನಿರ್ಮಾಪಕ ದಿಲ್ ರಾಜು, ಪುಷ್ಪ 2ರ ಮೈತ್ರಿ ಮೂವಿ ಮೇಕರ್ಸ್ ಮೇಲೆ ಐಟಿ ದಾಳಿ - ವಿಡಿಯೋ