ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ವಾಕಥಾನ್: ಶೈನ್ ಶೆಟ್ಟಿ ಭಾಗಿ - ಸ್ವಾಮಿ ವಿವೇಕಾನಂದರ 158 ನೇ ಜನ್ಮದಿನ
🎬 Watch Now: Feature Video
ಸ್ವಾಮಿ ವಿವೇಕಾನಂದರ 158ನೇ ಜಯಂತಿ ಪ್ರಯುಕ್ತ ಸಮರ್ಥ ಭಾರತ ನೇತೃತ್ವದಲ್ಲಿ ವಾಕಥಾನ್ ಆಯೋಜನೆ ಮಾಡಲಾಗಿತ್ತು. ಈ ವಾಕಥಾನ್ನಲ್ಲಿ ಸಹಸ್ರಾರು ಯುವಕರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಖ್ಯಾತ ಕಲಾವಿದರು ಮತ್ತು ಬಿಗ್ ಬಾಸ್ ವಿಜೇತ ಶೈನ್ ಶೆಟ್ಟಿ, ಉದ್ಯಮಿ ನಿಖಿಲ್ ಕಾಮತ್ ಹಾಗೂ ಸೋಮೇಶ್ವರ ಬೀಚ್ ಸ್ವಚ್ಛ ಮಾಡಿ ಪ್ರಧಾನಮಂತ್ರಿಗಳ ಮೆಚ್ಚುಗೆಗೆ ಪಾತ್ರರಾದ ಮಿನುಷಾ ಮತ್ತು ಅನುದೀಪ್ ಹೆಗ್ಡೆ ದಂಪತಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವಿವೇಕಾನಂದರ ಸಂದೇಶವನ್ನು ಸಾರುವ ಸಹಸ್ರಾರು ಫಲಕಗಳನ್ನು ಹಿಡಿದು ವಿಠ್ಠಲ ಮಲ್ಯ ರಸ್ತೆಯಿಂದ ಕಾರ್ಪೊರೇಷನ್ ವೃತ್ತದ ಬಳಿ ಸಾಗಿ ಕಸ್ತೂರ ಬಾ ರಸ್ತೆಯ ಮುಖಾಂತರ ಕಬ್ಬನ್ ಪಾರ್ಕ್ ವೃತ್ತದಲ್ಲಿ ವಾಕಥಾನ್ ಸಮಾಪ್ತಿಗೊಂಡಿತು.
TAGGED:
latest walkthon in bengaluru