ನವದೆಹಲಿ: ಬೆಂಗಳೂರಿಗರ ಬಹು ಬೇಡಿಕೆಯ ಅಮೆರಿಕ ಕಾನ್ಸುಲೇಟ್ ಕಚೇರಿಗೆ ಈಗಾಗಲೇ ಹಸಿರು ನಿಶಾನೆ ಸಿಕ್ಕಿದ್ದು, ನಾಳೆಯಿಂದ ಆರಂಭವಾಗಲಿದೆ. ಈ ಕಾರ್ಯ ಸಾಧ್ಯವಾಗುವಲ್ಲಿ ಕೇಂದ್ರ ಸರ್ಕಾರ ಹಾಗೂ ವಿದೇಶಾಂಗ ಸಚಿವ ಜೈ ಶಂಕರ್ ಪಾತ್ರವೂ ಇದೆ. ಈ ಹಿನ್ನೆಲೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಮೈಸೂರ್ ಪಾಕ್ ನೀಡಿ ಕೇಂದ್ರ ಸಚಿವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಇನ್ನು ಬೆಂಗಳೂರಿನಲ್ಲಿ ಯಾವ ಸ್ಥಳದಲ್ಲಿ ಈ ಕಚೇರಿಯಾಗಲಿದೆ ಎಂಬುದು ನಿರ್ಧಾರವಾಗಿಲ್ಲ. ಆದರೆ, ಕಚೇರಿ ಆರಂಭದ ಸಾಂಪ್ರದಾಯಿಕ ಕಾರ್ಯಕ್ರಮವೂ ನಾಳೆ ಅಂದರೆ ಜನವರಿ 17ರಂದು ವಿಠಲ್ ಮಲ್ಯ ರಸ್ತೆಯ ಜೆಡಬ್ಲ್ಯೂ ಮೆರಿಯೇಟ್ ಹೋಟೆಲ್ನಲ್ಲಿ ನಡೆಯಲಿದೆ. ಅಮೆರಿಕದ ಭಾರತ ರಾಯಭಾರಿ ಎರಿಕ್ ಗರ್ಸೆಟ್ಟಿ ಮತ್ತು ಅವರ ಉನ್ನತ ಮಟ್ಟದ ನಿಯೋಗ, ಪ್ರಮುಖ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
My dear Bengaluru,
— Tejasvi Surya (@Tejasvi_Surya) January 15, 2025
It’s official. The US Consulate is opening on January 17th.
It’s been made possible only and only because of PM @narendramodi and EAM @DrSJaishankar’s efforts.
What better way to thank our EAM than with our own Mysuru Pak! pic.twitter.com/uo85y2vsfl
ಈ ಹಿನ್ನೆಲೆ ಬುಧವಾರ ವಿದೇಶಾಂಗ ಸಚಿವ ಜೈ ಶಂಕರ್ ಅವರನ್ನು ಸಂಸದ ತೇಜಸ್ವಿ ಸೂರ್ಯ ಭೇಟಿಯಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಈ ವೇಳೆ ಇದು ಸಾಧ್ಯವಾಗಿದ್ದು ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಅವರ ಪ್ರಯತ್ನದಿಂದ. ನಮ್ಮ ನಾಡಿನ ಸಿಹಿ ಮೈಸೂರ್ ಪಾಕ್ ನೀಡಿ ಅವರಿಗೆ ಕೃತ್ಯಜ್ಞತೆ ಸಲ್ಲಿಸುವುದಕ್ಕಿಂತ ಉತ್ತಮ ಮಾರ್ಗವಿಲ್ಲ ಎಂದು ತೇಜಸ್ವಿ ಸೂರ್ಯ ವಿದೇಶಾಂಗ ಸಚಿವರಿಗೆ ಸಿಹಿ ಹಂಚುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇದೇ ವೇಳೆ ಮುಂದುವರೆದು ವಿಡಿಯೋದಲ್ಲಿ ಮಾತನಾಡಿರುವ ಸೂರ್ಯ, ಬೆಂಗಳೂರಿನಲ್ಲಿ ಯುಎಸ್ ಕಾನ್ಸುಲೇಟ್ ಕಚೇರಿ ಸ್ಥಾಪನೆಯಾಗುವುದರಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ. ನಗರವೂ ಈಗಾಗಲೇ ದೇಶದ ಐಟಿ ರಾಜಧಾನಿಯಾಗಿ ಗುರುತಿಸಿಕೊಂಡಿದ್ದು, ಅನೇಕ ಮಲ್ಟಿನ್ಯಾಷನಲ್ ಕಂಪನಿಗಳು ಇಲ್ಲಿವೆ. ಕಾನ್ಸುಲೇಟ್ ಕಚೇರಿ ಆರಂಭದಿಂದ ಎರಡು ದೇಶಗಳ ನಡುವಿನ ವಾಣಿಜ್ಯ ಮತ್ತು ವ್ಯಾಪಾರಕ್ಕೆ ಉತ್ತೇಜನ ಸಿಗುತ್ತದೆ. ಹಾಗೇ ಉದ್ಯಮಿಗಳಿಗೆ ಪ್ರಯಾಣವೂ ಸರಾಗವಾಗುತ್ತದೆ, ಈ ಬಹುಕಾಲದ ಬೇಡಿಕೆಯನ್ನು ಈಡೇರಿಸಿದ್ದಕ್ಕಾಗಿ ಮೋದಿ ಸರ್ಕಾರಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದಿದ್ದಾರೆ.
ತೇಜಸ್ವಿ ಸೂರ್ಯ ಬೆಂಗಳೂರಿನಲ್ಲಿ ಯುಎಸ್ ಕಾನ್ಸುಲೇಟ್ ಕಚೇರಿ ಆರಂಭಕ್ಕೆ ಮನವಿ ಮಾಡಿದ್ದರು. ಅವರು ಈ ಬಗ್ಗೆ ಬಲವಾಗಿ ಪದೇ ಪದೇ ಪ್ರಯತ್ನ ಮಾಡುತ್ತಿದ್ದ ಹಿನ್ನಲೆ ನಾನು ಮುಂದಿನ ಬಾರಿ ಯುಎಸ್ ರಾಜ್ಯ ಕಾರ್ಯದರ್ಶಿ ಅಂಥೋನಿ ಬ್ಲಿಂಕೆನ್ ಅವರನ್ನು ಭೇಟಿಯಾದಾಗ ಈ ಕುರಿತು ಮಾತಾಡಿರುವ ಭರವಸೆ ನೀಡಿದ್ದೆ. ಅದು ಈಗ ಸಾಧ್ಯವಾಗಿದೆ ಎಂದರು.
ಬೆಂಗಳೂರಿನಲ್ಲಿ ಯುಎಸ್ ಕಾನ್ಸುಲೇಟ್ ಕಚೇರಿ ಸ್ಥಾಪನೆಗೆ ತೇಜಸ್ವಿ ಸೂರ್ಯ 2019ರ ನವೆಂಬರ್ನಲ್ಲಿ ಜೈ ಶಂಕರ್ ಅವರನ್ನು ಭೇಟಿಯಾಗಿ ಲಿಖಿತ ಮನವಿ ನೀಡಿದ್ದರು. (ಐಎಎನ್ಎಸ್)
ಇದನ್ನೂ ಓದಿ: ಬೆಂಗಳೂರಿನಲ್ಲಿ ಅಮೆರಿಕ ಕಾನ್ಸುಲೇಟ್ ಕಚೇರಿ ಐತಿಹಾಸಿಕ ಹೆಜ್ಜೆ: ಸಂಸದ ತೇಜಸ್ವಿ ಸೂರ್ಯ