ಹುಬ್ಬಳ್ಳಿ: ಸತ್ಯ, ಅಹಿಂಸಾ ಮಾರ್ಗದಲ್ಲಿ ನಡೆಯುವ ಧರ್ಮ ಜೈನ ಧರ್ಮ. ಸತ್ಯ ಮಾರ್ಗದಲ್ಲಿ ಮೋಕ್ಷ ಕಾಣಬಹುದು ಎಂಬ ಸಾರ ಸಾರುತ್ತದೆ. ಜೈನ ತೀರ್ಥಂಕರರು ಮಾನವೀಯ ಮೌಲ್ಯಗಳ ಎತ್ತಿ ಹಿಡಿದಿದ್ದಾರೆ ಎಂದು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ವರೂರು ಕ್ಷೇತ್ರದಲ್ಲಿ ಬುಧವಾರ ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ವಿಶ್ವಶಾಂತಿಗಾಗಿ ಇಂದಿನಿಂದ ಮಹಾಮಸ್ತಕಾಭಿಷೇಕ, ಸುಮೇರು ಪರ್ವತ ಲೋಕಾರ್ಪಣೆ ಒಂದು ಐತಿಹಾಸಿಕ ಕಾರ್ಯಕ್ರಮ. ರಾಷ್ಟ್ರಸಂತ ಆಚಾರ್ಯ ಶ್ರೀಗುಣಧರ ನಂದಿ ಮಹಾರಾಜರ ನೇತೃತ್ವದಲ್ಲಿ ಒಳ್ಳೆಯ ಕಾರ್ಯಕ್ರಮ ಇದಾಗಿದೆ. ವರೂರು ಗ್ರಾಮದಲ್ಲಿ ಅತ್ಯಂತ ವಿಶಾಲವಾದ ಪ್ರದೇಶದಲ್ಲಿ ಸುಮೇರು ಪರ್ವತ ನಿರ್ಮಾಣ ಮಾಡಲಾಗಿದೆ. ಇದೊಂದು ಅತ್ಯಂತ ಪುಣ್ಯ ಕ್ಷೇತ್ರ ಎಂದು ಹೇಳಿದರು.
ನಾಡಿನ ಅನೇಕ ಸಾಧು ಸಂತರು ಇಲ್ಲಿ ನೆರೆದಿದ್ದಾರೆ. ಧರ್ಮ ಹಾಗೂ ಮೋಕ್ಷಕ್ಕಾಗಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಧರ್ಮ ಜಾಗೃತಿಗೆ ಇದೊಂದು ಮಾದರಿ ಕಾರ್ಯಕ್ರಮವಾಗಿದೆ ಎಂದರು.
ಜೈನ ಧರ್ಮ ಉಚ್ಛ ಮಟ್ಟದ ಸಂಸ್ಕಾರ ನೀಡುತ್ತದೆ. ವ್ಯಸನ ಮುಕ್ತ ಜೊತೆಗೆ ಆರೋಗ್ಯಯುಕ್ತ ಸಮಾಜ ನಿರ್ಮಾಣಕ್ಕೆ ದಾರಿ ದೀಪವಾಗಿದೆ. ಸಾಂಸ್ಕೃತಿಕ ಪ್ರಾಚೀನಕ್ಕೆ ಈ ಧರ್ಮ ಸೇರಿದೆ. ಜೈನ ಧರ್ಮ ಪರೋಪಕಾರಿಯಲ್ಲಿ ಕೈಲಾಸ ಕಾಣುತ್ತದೆ. ಭಗವಾನ್ ಮಹಾವೀರರು ನಾಡಿನ ವಿಶ್ವ ಶಾಂತಿಗಾಗಿ ಸಂದೇಶ ಸಾರಿದ್ದಾರೆ. ಪಂಚಕಲ್ಯಾಣ ಮಹೋತ್ಸವ ಹಾಗೂ ಸಮೇರ ಪರ್ವತ ಲೋಕಾರ್ಪಣೆ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಆಶಿಸಿದರು.
![thawar-chand-gehlot](https://etvbharatimages.akamaized.net/etvbharat/prod-images/16-01-2025/kn-hbl-02-gehalot-governer-avb-7208089_15012025203120_1501f_1736953280_135.jpg)
ಈ ಹಿಂದೆ ಶ್ರೀಗಳ ಜನ್ಮ ಶತಮಾನದ ಕಾರ್ಯಕ್ರಮಕ್ಕೆ ಮತ್ತು ಸುಮೇರು ಪರ್ವತ ನಿರ್ಮಾಣದ ವೇಳೆಯೂ ಆಗಮಿಸಿದ್ದೆ. 17 ನೇ ವಯಸ್ಸಿನಲ್ಲಿ ಬ್ರಹ್ಮಚಾರಿ, 27ಕ್ಕೆ ಆಚಾರ್ಯರಾಗಿ ಗುಣಧರ ನಂದಿ ಶ್ರೀಗಳು ಸನ್ಯಾಸತ್ವ ಸ್ವೀಕರಿಸಿದ್ದಾರೆ. ಬಡವರಿಗೆ ಶಿಕ್ಷಣ, ಆರೋಗ್ಯ, ಆಧ್ಯಾತ್ಮಿಕ ಸೇರಿದಂತೆ ಎಲ್ಲ ಕಾರ್ಯವನ್ನು ಮಾಡುತ್ತಿದ್ದಾರೆ. ಮಹಾ ಮಸ್ತಕಾಭಿಷೇಕ, ಪಂಚ ಕಲ್ಯಾಣ, ನವಗ್ರಹ ಇತ್ಯಾದಿ ಮಾಡಿದ್ದಾರೆ. ನಾವು ಸಂತರಾಗಲು ಸಾಧ್ಯವಿಲ್ಲ. ಆದರೆ ಅವರ ಸಂಪರ್ಕಕ್ಕೆ ಬಂದು ಅವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಸತ್ಯ, ಅಹಿಂಸಾ, ಧರ್ಮ ಮಾರ್ಗದಲ್ಲಿ ನಡೆಯುವ ಮೂಲಕ ಜೈನ ಸಮಾಜ ಮಾದರಿಯಾಗಿದೆ. ತೀರ್ಥಂಕರರು ಮಾನವ ಕಲ್ಯಾಣಕ್ಕೆ ಜನಿಸಿದ ದೇವರಾಗಿದ್ದಾರೆ. ಇಂತಹ ಮಹಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲರೂ ಪಾವನರಾಗುವಂತೆ ಮಾಡಿದ್ದಾರೆ. ರಾಜ್ಯಪಾಲರಾದ ನಂತರ ರಾಜ ಭವನದಲ್ಲಿ ಮಾಂಸಾಹಾರವನ್ನು ನಿಷೇಧಿಸಲಾಗಿದೆ. ಯಾರೇ ವಿದೇಶಿಗರು ಬಂದರೂ ಅವರಿಗೆ ಸಸ್ಯಾಹಾರ ನೀಡಲಾಗುತ್ತಿದೆ ಎಂದು ಹೇಳಿದರು.
ವಿಶ್ವಶಾಂತಿಗೆ, ಸಫಲತೆಗೆ ನಾವು ಜೈನ ಸಮಾಜದ ಸಿದ್ಧಾಂತ ಪಾಲಿಸೋಣ. ಭಾರತೀಯ ಸಂಸ್ಕೃತಿಯ ಪರಿಸರ, ಪ್ರಾಣಿ, ಪ್ರಕೃತಿಯನ್ನು ಪೂಜಿಸಲಾಗುತ್ತದೆ. ಈಗ ಪರಿಸರ ಅಸಮತೋಲನವಾಗಿ ನಾಶವಾಗುತ್ತಿದೆ. ಅದನ್ನು ಸಂರಕ್ಷಿಸುವ ಕೆಲಸ ಮಾಡಬೇಕಿದೆ ಎಂದರು
ಇದನ್ನೂ ಓದಿ : ಲಕ್ಕಮ್ಮ ದೇವಿ ಜಾತ್ರೆಗೆ ಊರಿಗೆ ಊರೇ ಖಾಲಿ: ದನಕರುಗಳನ್ನು ಕರೆದೊಯ್ಯುವ ಗ್ರಾಮಸ್ಥರು! - GULEDA LAKKAMMA DEVI FAIR