ಮೆಕ್ಕೆಜೋಳದ ಬೆಳೆಗೆ ಲದ್ದಿಹುಳು ಕಾಟ.. ಕೃಷಿ ಇಲಾಖೆ ಉಪನಿರ್ದೇಶಕಿ ಭೇಟಿ ನೀಡಿ ಪರಿಶೀಲನೆ
🎬 Watch Now: Feature Video
ಹಾವೇರಿ: ಜಿಲ್ಲೆ ಹಿರೇಕೆರೂರು ಮತ್ತು ರಟ್ಟಿಹಳ್ಳಿ ತಾಲೂಕುಗಳಲ್ಲಿ ಮೆಕ್ಕೆಜೋಳಕ್ಕೆ ಲದ್ದಿಹುಳು ಕಾಟ ಶುರುವಾಗಿದೆ. ಸುಮಾರು 36 ಸಾವಿರ ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಲಾಗಿದ್ದು ಈ ಬೆಳೆಗೆ ಇದೀಗ ಲದ್ದಿಹುಳು ಕಾಟ ಶುರುವಾಗಿರುವುದು ರೈತರಲ್ಲಿ ಆತಂಕ ತಂದಿದೆ. ಈ ಹಿನ್ನೆಲೆ ರೈತರ ಜಮೀನಿಗೆ ಕೃಷಿ ಇಲಾಖೆ ಉಪನಿರ್ದೇಶಕಿ ಸ್ಪೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.