ದಾವಣಗೆರೆಯಲ್ಲಿ ಅಭಿಮಾನಿಗಳಿಂದ ವಿಷ್ಣುದಾದ ಹುಟ್ಟುಹಬ್ಬ ಆಚರಣೆ - vishnuvardhan birthday celebration in davanagere
🎬 Watch Now: Feature Video

ದಾವಣಗೆರೆ: ಸಾಹಸಸಿಂಹ ಡಾ.ವಿಷ್ಣುವರ್ಧನ್ ಅಭಿಮಾನಿವೋರ್ವ 51 ಕೆ.ಜಿ. ಕತ್ತರಿಸಿ, ವಿತರಿಸುವ ಮೂಲಕ ವಿಶೇಷವಾಗಿ ವಿಷ್ಣುವರ್ಧನ್ ಜನ್ಮದಿನವನ್ನು ಆಚರಿಸಿದ್ದಾರೆ. ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಎದುರು ಬೀಡಾ ಅಂಗಡಿ ನಡೆಸುತ್ತಿರುವ ಲೋಕೇಶ್, ಸಾಹಸಸಿಂಹ ಅವರ ದೊಡ್ಡ ಫ್ಯಾನ್. ವಿಷ್ಣು ಹುಟ್ಟುಹಬ್ಬದ ಈ ಸಮಯದಲ್ಲಿ ವಿಷ್ಣುವರ್ಧನ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಕೇಕ್ ಕತ್ತರಿಸಿ ಸಂಭ್ರಮಿಸಿದರು. ಅಭಿಮಾನಿಗಳಿಗೆ ಹಾಗೂ ಸಾರ್ವಜನಿಕರಿಗೆ ಕೇಕ್ ವಿತರಿಸಿದರು. ಕಳೆದ ಹಲವು ವರ್ಷಗಳಿಂದಲೂ ಲೋಕೇಶ್ ವಿಷ್ಟುವರ್ಧನ್ ಅವರ ಹುಟ್ಟು ಹಬ್ಬವನ್ನ ಅದ್ಧೂರಿಯಾಗಿ ಆಚರಿಸುತ್ತಾ ಬಂದಿದ್ದಾರೆ.