Video-ಕುಮಟಾ ಕರಾವಳಿಯಲ್ಲಿ ಸುಂಟರಗಾಳಿಗೆ ಒಂದಾದ ಆಕಾಶ ಭೂಮಿ - ಸಮುದ್ರದಲ್ಲಿ ಎದ್ದ ಸುಂಟರಗಾಳಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-11938745-thumbnail-3x2-abc.jpg)
ಯಾಸ್ ಚಂಡಮಾರುತದ ಆತಂಕದ ಬೆನ್ನಲ್ಲೇ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಾಗಲದ ಹುಬ್ಬಣಗೇರಿ ಭಾಗದಲ್ಲಿ ಸೃಷ್ಟಿಯಾಗಿದ್ದು ಎನ್ನಲಾದ ಸುಂಟರಗಾಳಿಯ ನೀರಸುಳಿಕಂಬದ ದೃಶ್ಯಗಳು ನೋಡುಗರ ಮೈ ಜುಮ್ ಎನ್ನುವಂತೆ ಮಾಡಿದೆ. ಕಾಗಲನ ಹುಬ್ಬಣಗೇರಿ ಭಾಗದಲ್ಲಿ ಶುಕ್ರವಾರ ಸಂಜೆ ಹೊತ್ತಿಗೆ ಮೋಡದ ಜೊತೆಗೆ ಸಮುದ್ರದಲ್ಲಿ ಎದ್ದ ಸುಂಟರಗಾಳಿಯಿಂದ ನೀರಿನ ಹನಿಗಳು ಸುರುಳಿಯಾಕಾರದಲ್ಲಿ ಆಕಾಶದೆತ್ತರಕ್ಕೆ ಹಾರಿ ನೀರಸುಳಿಕಂಬ ಸೃಷ್ಟಿಯಾಗಿತ್ತು. ಇದನ್ನು ಸ್ಥಳೀಯ ಯುವಕರು ತಮ್ಮ ಮೊಬೈಲ್ ಗಳಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.