ಜಂಬೂಸವಾರಿ ಮೆರವಣಿಗೆಯಲ್ಲಿ ಕುಣಿಯಲು ಸಜ್ಜಾದ ವೀರಗಾಸೆ ಕಲಾವಿದರು - Mysore dasara Jambusawari procession
🎬 Watch Now: Feature Video

ಮೈಸೂರು: ಜಂಬೂಸವಾರಿ ಮೆರವಣಿಗೆ ಕ್ಷಣಗಣನೆ ಆರಂಭವಾಗಿದ್ದು, ಮೆರವಣಿಗೆಗೆ ಹಸಿರು ನಿಶಾನೆ ತೋರಲು ವೀರಗಾಸೆ ಕಲಾವಿದರು ಸಜ್ಜಾಗಿದ್ದಾರೆ. ಮುಖ್ಯಮಂತ್ರಿಯವರು ಸಂಪ್ರದಾಯದಂತೆ ನಂದಿಧ್ವಜಕ್ಕೆ ಪೂಜೆ ಮಾಡುತ್ತಿದ್ದಂತೆ ವೀರಗಾಸೆ ಕಲಾವಿದರು ವೀರಭದ್ರನ ಕುಣಿತ ಮಾಡುತ್ತಾ ಮೆರವಣಿಗೆಯಲ್ಲಿ ಮೊದಲು ಸಾಗುವ ಪದ್ಧತಿ ರೂಢಿಯಲ್ಲಿದೆ. ಇಂದು ಕೂಡ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಂದಿಧ್ವಜಕ್ಕೆ ಪೂಜೆ ಮಾಡುತ್ತಿದ್ದಂತೆ ವೀರಗಾಸೆ ಕಲಾವಿದರು ಜಂಬೂಸವಾರಿ ಮೆರವಣಿಗೆಯಲ್ಲಿ ಪ್ರಪ್ರಥಮವಾಗಿ ಸಾಗಿದ ನಂತರ ಉಳಿದ ಕಲಾತಂಡಗಳು ಹಿಂದೆ ಬರಲಿವೆ.